Log In
BREAKING NEWS >
````````ಸಮಸ್ತ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ " ಮಕರ ಸ೦ಕ್ರಮಣ" ಶುಭಾಶಯಗಳು ```````

ಮಿಲಿಟರಿ ವಿಮಾನ ದುರಂತ, 15 ಮಂದಿ ಸಾವು; ಓರ್ವ ಪವಾಡಸದೃಶ ಪಾರು!

ಟೆಹ್ರಾನ್: ಪ್ರತಿಕೂಲ ಹವಾಮಾನದಿಂದಾಗಿ 707 ಮಿಲಿಟರಿ ಕಾರ್ಗೋ ವಿಮಾನ ಡಿಕ್ಕಿ ಹೊಡೆದ ಪರಿಣಾಮ 15 ಮಂದಿ ಸಾವನ್ನಪ್ಪಿದ್ದು, ಒಬ್ಬರು ಪವಾಡ ಸದೃಶ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಸೋಮವಾರ ಇರಾನ್ ನ ಫಾತ್ ವಿಮಾನ ನಿಲ್ದಾಣ ಸಮೀಪ ನಡೆದಿದೆ.

ಫಾರ್ಸ್ಸ್ ನ್ಯೂಸ್ ಏಜೆನ್ಸಿ ವರದಿ ಪ್ರಕಾರ, ಮಿಲಿಟರಿ ವಿಮಾನದಲ್ಲಿ ಒಟ್ಟು 16 ಮಂದಿ ಇದ್ದಿದ್ದು, ವಿಮಾನದ ಇಂಜಿನಿಯರ್ ಮಾತ್ರ ಘಟನೆಯಲ್ಲಿ ಬದುಕಿ ಉಳಿದಿರುವುದಾಗಿ ಇರಾನ್ ಮಿಲಿಟರಿ ಅಧಿಕಾರಿಗಳು ತಿಳಿಸಿದ್ದಾರೆ.

ಮಿಲಿಟರಿ ವಿಮಾನ ಪ್ರತಿಕೂಲ ಹವಾಮಾನದಿಂದಾಗಿ ರನ್ ವೇ ತಲುಪಲು ವಿಫಲವಾಗಿದ್ದು, ಜನವಸತಿ ಇರುವ ಕಾಂಪ್ಲೆಕ್ಸ್ ವೊಂದಕ್ಕೆ ಡಿಕ್ಕಿ ಹೊಡೆದಿತ್ತು. ಇದರ ಪರಿಣಾಮ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿತ್ತು ಎಂದು ಮಿಲಿಟರಿ ನೀಡಿರುವ ಪ್ರಕಟಣೆಯಲ್ಲಿ ವಿವರಿಸಿದೆ.  ಆದರೆ ಮತ್ತೊಂದು ವರದಿ ಪ್ರಕಾರ ಪೈಲಟ್ ತಪ್ಪಿನಿಂದಾಗಿ ಈ ದುರಂತ ಸಂಭವಿಸಿದೆ ಎಂದು ಹೇಳಿದೆ.

ಘಟನೆಯಲ್ಲಿ ಬದುಕಿ ಉಳಿದಿರುವ ಇಂಜಿನಿಯರ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ದುರಂತ ನಡೆದ ಸ್ಥಳಕ್ಕೆ ರಕ್ಷಣಾ ತಂಡವನ್ನು ಕಳುಹಿಸಲಾಗಿದೆ.

No Comments

Leave A Comment