Log In
BREAKING NEWS >
ನಡೆದಾಡುವ ದೇವರು “ಸಿದ್ದಗಂಗಾಶ್ರೀ” ಶಿವೈಕ್ಯ......ಜನವರಿ 25ಕ್ಕೆ ಬೆಳಿಗ್ಗೆ 9.30ಕ್ಕೆ ಉಡುಪಿಯ ಟಿ ಎ೦ ಎ ಪೈ ಹಿ೦ಬದಿಯಲ್ಲಿನ ಸ್ಥಳದಲ್ಲಿ ನೂತನ "ನಯಾಬ್ "ವಸತಿ ಸಮುಚ್ಚಾಯದ ಶಿಲಾನ್ಯಾಸ ಜರಗಲಿದೆ

ಉಡುಪಿ ಶ್ರೀಕೃಷ್ಣಮಠದಲ್ಲಿ “ಮಕರಸ೦ಕ್ರಮಣ”ದ ಸ೦ಭ್ರಮದ “ತ್ರಿರಥೋತ್ಸವ” …

ಉಡುಪಿಯ ಶ್ರೀಕೃಷ್ಣಮಠದಲ್ಲಿ ವರ್ಷ೦ಪ್ರತಿಯ ವಾಡಿಕೆಯ೦ತೆ ನಡೆಯುವ ಮಕರಸ೦ಕ್ರಮಣದ ತ್ರಿರಥೋತ್ಸವವು ಸೋಮವಾರದ೦ದು ಪರ್ಯಾಯ ಶ್ರೀಪಲಿಮಾರು ಶ್ರೀವಿದ್ಯಾಧೀಶ ಶ್ರೀಪಾದರ ಹಾಗೂ ವಿವಿಧ ಸಪ್ತ ಮಠಾಧೀಶರ ಉಪಸ್ಥಿತಿಯಲ್ಲಿ ಸಾವಿರಾರು ಮ೦ದಿ ಭಕ್ತಜನರ ಭಾಗವಹಿಸುವಿಕೆಯೊ೦ದಿಗೆ ವೈಭವದಿ೦ದ ಜರಗಿತು. ಶ್ರೀ ಕೃಷ್ಣ ಮಠದಲ್ಲಿ ಮಕರ ಸಂಕ್ರಾಂತಿಯ ಪರ್ವಕಾಲದಲ್ಲಿ ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರ ಬೃಹತ್ ಯೋಜನೆಯಾದ (ಅಷ್ಟ ಮಠಗಳು ಮತ್ತು ಸುಬ್ರಹ್ಮಣ್ಯ ಮಠದ ತಾಳಪತ್ರ ಗ್ರಂಥಗಳನ್ನು ಆಧರಿಸಿ ವೈಷ್ಣವ ಪಾಠಾನುಸಾರಿಯಾಗಿ ಸಂಶೋಧಿಸಲ್ಪಟ್ಟ ಭಗವಾನ್ ಶ್ರೀವೇದವ್ಯಾಸ ಪ್ರಣೀತ “ಶ್ರೀ ಮಹಾಭಾರತ” 24 ಸಂಪುಟಗಳನ್ನೊಳಗೊಂಡ ಸಂಸ್ಕೃತ ಆವೃತ್ತಿ ಹಾಗೂ ಕರ್ಣ,ಶಲ್ಯ,ಸೌಪ್ತಿಕ,ಸ್ತ್ರೀಪರ್ವ ಹೀಗೆ ನಾಲ್ಕು ಕನ್ನಡ ಆವೃತ್ತಿಗಳ ಬೃಹತ್ ಗ್ರಂಥವನ್ನು ಸಪ್ತೋತ್ಸವದ ಸಂದರ್ಭದಲ್ಲಿ ಶ್ರೀಕೃಷ್ಣನ ಆರಾಧಕರಾದ ಅಷ್ಟಮಠದ ಯತಿಗಳಿಂದ ಮೂರೂ ರಥಗಳ ಸಮಕ್ಷಮದಲ್ಲಿ ಲೋಕಾರ್ಪಣೆಗೊಂಡಿತು.

ಸಮಾರಂಭದಲ್ಲಿ ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು,ಪೇಜಾವರ ಶ್ರೀವಿಶ್ವೇಶತೀರ್ಥ ಶ್ರೀಪಾದರು,ಕೃಷ್ಣಾಪುರ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು ಅದಮಾರು ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು,ಪೇಜಾವರ ಕಿರಿಯ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಕಾಣಿಯೂರು ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು,ಸೋದೆ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು,ಅದಮಾರು ಕಿರಿಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು,ಸುಬ್ರಹ್ಮಣ್ಯ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು,ಭಂಡಾರಕೇರಿ ಮಠಾಧೀಶರಾದ ಶ್ರೀ ವಿದ್ಯೇಶ ತೀರ್ಥ ಶ್ರೀಪಾದರು ಮತ್ತು ಬನ್ನಂಜೆ ಶ್ರೀ ರಾಘವೇಂದ್ರ ತೀರ್ಥ ಸ್ವಾಮೀಜಿಯವರು ಉಪಸ್ಥಿತರಿದ್ದರು.

ರಥಗಳನ್ನು ಸು೦ದರವಾಗಿ ವಿದ್ಯುತ್ ದೀಪಾಲ೦ಕಾರದೊ೦ದಿಗೆ ಶೃ೦ಗರಿಸಲಾಗಿತ್ತು. ಕೆರೆ ಉತ್ಸವದೊ೦ದಿಗೆ ಶ್ರೀದೇವರನ್ನು ಪಲ್ಲಕಿಯಲ್ಲಿರಿಸಿ ನ೦ತರ ಪರ್ಯಾಯ ಶ್ರೀಗಳು ಹಾಗೂ ಅದಮಾರು ಕಿರಿಯಶ್ರೀಗಳ ಉಪಸ್ಥಿತಿಯಲ್ಲಿ ಶ್ರೀದೇವರ ಉತ್ಸವ ಮೂರ್ತಿಯನ್ನು ರಥದಲ್ಲಿ ಇರಿಸಲಾಯಿತು. ನ೦ತರ ಗೋವಿ೦ದ…ಗೋಪಾಲ ನಾಮಸ್ಮರಣೆಯೊ೦ದಿಗೆ ರಥಬೀದಿಯಲ್ಲಿ ರಥವನ್ನು ಭಕ್ತಜನರು ಎಳೆದರು. ನ೦ತರ ವಿಶೇಷ ಸುಡುಮದ್ದಿನ ಪ್ರದರ್ಶನವೂ ಜರಗಿತು. ಮ೦ಗಳವಾರದ೦ದು ಹಗಲುರಥೋತ್ಸವವು ಬೆಳಿಗ್ಗೆ ವಿಜೃ೦ಭಣೆಯಿ೦ದ ನೆರವೇರಿತು.

No Comments

Leave A Comment