Log In
BREAKING NEWS >
````````ಸಮಸ್ತ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ " ಮಕರ ಸ೦ಕ್ರಮಣ" ಶುಭಾಶಯಗಳು ```````

ಪ್ಯಾರಿಸ್‌ ನಗರದಲ್ಲಿ ಪ್ರಬಲ ಸ್ಫೋಟ;ಹಲವರಿಗೆ ಗಂಭೀರ ಗಾಯ

ಪ್ಯಾರಿಸ್‌: ನಗರದ ಹೃದಯ ಭಾಗದಲ್ಲಿ ಬೇಕರಿಯೊಂದರಲ್ಲಿ ಭಾರೀ ಸ್ಫೋಟ ಸಂಭವಿಸಿ ಹಲವರು ಗಾಯಗೊಂಡಿರುವ ಘಟನೆ ಶನಿವಾರ ನಡೆದಿದೆ.

ಭಾರೀ ಸದ್ದಿನೊಂದಿಗೆ ಸ್ಫೋಟ ನಡೆದಾಗ ಬೇಕರಿ ಮತ್ತು ಸುತ್ತ ಮುತ್ತಲಿನ ಮಳಿಗೆಗಳ ಗಾಜುಗಳು ಮತ್ತು ಪಿಠೊಪಕರಣಗಳು ಛಿದ್ರವಾಗಿವೆ. ಜನತೆ ಸ್ಫೋಟದ ತೀವ್ರತರವಾದ ಸದ್ದು ಕೇಳಿ ಬೆಚ್ಚಿ ಬಿದ್ದಿದ್ದಾರೆ.ಗ್ಯಾಸ್‌ ಲೀಕ್‌ ಆಗಿ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಸ್ಫೋಟದ ಬಳಿಕ ಭಾರಿ ಪ್ರಮಾಣದಲ್ಲಿ ಹೊಗೆ ಕಾಣಿಸಿಕೊಂಡಿದ್ದು, ಕಟ್ಟಡಗಳ ಕೆಳ ಮಹಡಿಗಳು ಗಂಭೀರ ಸ್ವರೂಪದಲ್ಲಿ ಹಾನಿಗೊಳಗಾಗಿವೆ.

ಕಟ್ಟಡದ ಮೇಲೆ ಕಂಗಾಲಾಗಿ ನಿಂತಿದ್ದ ಜನರನ್ನು ಏಣಿಗಳ ಮೂಲಕ ರಕ್ಷಣಾ ಕಾರ್ಯ ನಡೆಸಿ ಕೆಳಗಿಳಿಸಲಾಯಿತು.

ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

No Comments

Leave A Comment