Log In
BREAKING NEWS >
ಸ್ಯಾಂಡಲ್ ವುಡ್ ನಟ ದರ್ಶನ್ ಮನೆ, ಕಚೇರಿ ಮೇಲೆ ಕಲ್ಲು ತೂರಾಟ,ಕಲ್ಲು ತೂರಾಟ ನಡೆಸಿದ ಪರಿಣಾಮ ಕಾರಿನ ಗಾಜು ಒಡೆದಿದ್ದು, ದುಷ್ಕರ್ಮಿಗಳು...

ಕರಾವಳಿಯಲ್ಲಿ ಮೀನುಗಾರರ ಬೃಹತ್‌ ಪ್ರತಿಭಟನೆ; 3 ಗಂಟೆ ಹೆದ್ದಾರಿ ಬಂದ್‌

ಉಡುಪಿ /ಮಂಗಳೂರು/ಕಾರವಾರ: 22 ದಿನಗಳ ಹಿಂದೆ  ನಾಪತ್ತೆಯಾಗಿರುವ 7 ಮಂದಿ ಉಡುಪಿಯ ಮೀನುಗಾರರನ್ನು ಹುಡುಕಿ ಕೊಡಲು ಆಗ್ರಹಿಸಿ ಸಾವಿರಾರು ಮೀನುಗಾರರು ಕಡಲಿಗಿಳಿಯದೆ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಭಾನುವಾರ ಬೃಹತ್‌ ಪ್ರತಿಭಟನೆ ನಡೆಸಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇಳಿದ್ದಾರೆ.

ಉಡುಪಿಯಲ್ಲಿ  ಬೃಹತ್‌ ಪ್ರತಿಭಟನೆ
ಮಲ್ಪೆಯಿಂದ ಕಾಲ್ನಡಿಗೆಯಲ್ಲಿ  ಹೊರಟ ಸಾವಿರಾರು ಮೀನುಗಾರರು  ಕರಾವಳಿ ಬೈಪಾಸ್‌ನಲ್ಲಿ ತಿರುಗಿ ಮೇಲ್ಸೇತುವೆ ಮೂಲಕ ಅಂಬಲಪಾಡಿ ಬೈಪಾಸ್‌ಗೆ ಬಂದು ರಾಸ್ತಾ ರೋಕೋ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ.

3 ಗಂಟೆ ಹೆದ್ದಾರಿ ಬಂದ್‌ 

ಮೂರು ಗಂಟೆಗಳ ಕಾಲ ರಾಷ್ಟ್ರೀಯ ಹೆದ್ದಾರಿ 66 ನ್ನು ತಡೆ ಮಾಡಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಾ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ರಘುಪತಿ ಭಟ್‌, ಮಾಜಿ ಸಂಸದ ಜಯಪ್ರಕಾಶ್‌ ಹೆಗ್ಡೆ , ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಸೇರಿದಂತೆ ಪ್ರಮುಖ ರಾಜಕೀಯ ನಾಯಕರು ಭಾಗಿಯಾಗಿದ್ದರು.

ಮಂಗಳೂರಿನಲ್ಲೂ ಪ್ರತಿಭಟನೆ
ಮಲ್ಪೆ ಮೀನುಗಾರರ ಸಂಘ ಆಯೋಜಿಸಿರುವ ರಾಸ್ತಾ ರೋಕೋ ಚಳವಳಿಯನ್ನು ಬೆಂಬಲಿಸಿ ನಗರದ ಬಂದರನ್ನು ಪೂರ್ಣ ಬಂದ್‌ ಮಾಡಲಾಗಿಲಿದೆ. 500ಕ್ಕೂ ಅಧಿಕ ಮಂದಿ ಮೀನುಗಾರರು ಉಡುಪಿಗೆ ಬಂದು ಪ್ರತಿಭಟನೆಯಲ್ಲಿ  ಭಾಗವಹಿಸಲಿದ್ದಾರೆ. ಮೀನುಗಾರಿಕೆ ಸಂಘಟನೆಗಳು ಹೋರಾಟಕ್ಕೆ ಬೆಂಬಲ ಸೂಚಿಸಿವೆ.

ಮಲ್ಪೆಯಿಂದ ಡಿ. 13 ರಂದು ಮೀನುಗಾರಿಕೆಗೆ ತೆರಳಿದ್ದ  ಸುವರ್ಣ ತ್ರಿಭುಜ  ಬೋಟ್‌ ಸ ಮೇತ  7 ಮೀನುಗಾರರು ಡಿ.15 ರಂದು ನಾಪತ್ತೆಯಾಗಿದ್ದರು, 22 ದಿನಗಳು ಕಳೆದರೂ  ಶೋಧ ಮುಂದುವರಿದಿದ್ದರೂ ಇದುವರೆಗೆ ಯಾರೋಬ್ಬರ ಸುಳಿವು ದೊರೆತಿಲ್ಲ.

No Comments

Leave A Comment