Log In
BREAKING NEWS >
ನಡೆದಾಡುವ ದೇವರು “ಸಿದ್ದಗಂಗಾಶ್ರೀ” ಶಿವೈಕ್ಯ......ಜನವರಿ 25ಕ್ಕೆ ಬೆಳಿಗ್ಗೆ 9.30ಕ್ಕೆ ಉಡುಪಿಯ ಟಿ ಎ೦ ಎ ಪೈ ಹಿ೦ಬದಿಯಲ್ಲಿನ ಸ್ಥಳದಲ್ಲಿ ನೂತನ "ನಯಾಬ್ "ವಸತಿ ಸಮುಚ್ಚಾಯದ ಶಿಲಾನ್ಯಾಸ ಜರಗಲಿದೆ

ಉಡುಪಿ:ಲೋಕ ಕಲ್ಯಾಣಾರ್ಥವಾಗಿ ದಶಲಕ್ಷ ರಾಮಜಪ ಯಜ್ಞ

ಉಡುಪಿ:ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ಶಿವಳ್ಳಿ ಬ್ರಾಹ್ಮಣ ಪುರೋಹಿತ ಸಂಘದವರ ವತಿಯಿಂದ ಲೋಕ ಕಲ್ಯಾಣಾರ್ಥವಾಗಿ ದಶಲಕ್ಷ ರಾಮಜಪ ಯಜ್ಞವು ಪರ್ಯಾಯ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಹಾಗೂ ಅದಮಾರು ಕಿರಿಯ ಮಠಾಧೀಶರಾದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಹಿರಿಯ ರಿತ್ವಿಜರಿಂದ ನಡೆಯಿತು.

ನಂತರ ಸಮಾರಂಭದಲ್ಲಿ ಹಿರಿಯ ವೈದಿಕರಾದ ಮಂಗಳೂರು ಗಣಪತಿ ಆಚಾರ್ಯರು,ಇರ್ವತ್ತೂರು ಶ್ರೀನಿವಾಸ ಜೋಯಿಸರು,ಬೆಳ್ಳಾರ್ಪಡಿ ಪದ್ಮನಾಭ ಉಪಾಧ್ಯಾಯರು ಮತ್ತು ಶಿರೂರು ಲಕ್ಷ್ಮೀನಾರಾಯಣ ಭಟ್ಟರನ್ನು ಪರ್ಯಾಯ ಶ್ರೀಪಾದರು ಸನ್ಮಾನಿಸಿ,ರಾಮಾಯಣದಲ್ಲಿ ಶ್ರೀರಾಮ ಮತ್ತು ಪರಶುರಾಮ ದೇವರ ಎರಡು ರೂಪ ಒಂದಾದಂತೆ, ನಮ್ಮ ಬ್ರಾಹ್ಮಣರು ಮತ್ತು ಕ್ಷತ್ರಿಯರು ಅಂದರೆ ದೇಶವನ್ನಾಳುವವರು ಐಕಮತ್ಯದಿಂದ ಸಮಾಜವನ್ನು ಮುನ್ನಡೆಸುವಂತಾಗಲಿ ಹಾಗೂ ನಮ್ಮ ದೇಶ ರಾಮರಾಜ್ಯವಾಗಿ ಶೀಘ್ರದಲ್ಲಿ ರಾಮಮಂದಿರ ನಿರ್ಮಾಣವಾಗಲಿ ಎನ್ನುವ ಉದ್ದೇಶದಿಂದ ಮಾಡಿದ ರಾಮಜಪ ಯಜ್ಞ ಸಾರ್ಥಕವಾಗಲಿ ಎಂದು ಸಂದೇಶ ನೀಡಿದರು.

ಪುರೋಹಿತರ ಸಂಘದ ಅಧ್ಯಕ್ಷರಾದ ಕೆ.ರಾಮದಾಸ ಭಟ್ ಸ್ವಾಗತಿಸಿದರು, ಉಡುಪಿ ಶಾಸಕರಾದ ಕೆ.ರಘುಪತಿ ಭಟ್ ಇವರು ದೇಶದ ಅಭಿವೃದ್ಧಿಗಾಗಿ ಸಂಘದ ಮುಖಾಂತರ ಮಾಡಿದ ಈ ಯಜ್ಞದಿಂದ ಸಮಾಜ ನೆಮ್ಮದಿ ಕಾಣುವಂತಾಗಲಿ ಎಂದು ಹಾರೈಸಿದರು.ಉಪಾಧ್ಯಕ್ಷರಾದ ಕೆ.ವಿಠ್ಠಲ ತಂತ್ರಿ ಧನ್ಯವಾದ ನೀಡಿದರು.

No Comments

Leave A Comment