Log In
BREAKING NEWS >
ಸ್ಯಾಂಡಲ್ ವುಡ್ ನಟ ದರ್ಶನ್ ಮನೆ, ಕಚೇರಿ ಮೇಲೆ ಕಲ್ಲು ತೂರಾಟ,ಕಲ್ಲು ತೂರಾಟ ನಡೆಸಿದ ಪರಿಣಾಮ ಕಾರಿನ ಗಾಜು ಒಡೆದಿದ್ದು, ದುಷ್ಕರ್ಮಿಗಳು...

ಕೆಜಿಎಫ್ ಮೇನಿಯಾ: ಯಶ್ ನಟನೆಗೆ ಮನಸೋತ ಬಾಲಿವುಡ್ ಖ್ಯಾತ ನಟಿ, ಉಪೇಂದ್ರ ಬೆಡಗಿ ರಾಕಿ ಭಾಯ್‌ಗೆ ಹೇಳಿದ್ದೇನು?

ಕೆಜಿಎಫ್ ಚಿತ್ರದ ಆರ್ಭಟಕ್ಕೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗಿದ್ದು ಪರಭಾಷಿಗರು ಫಿದಾ ಆಗಿದ್ದಾರೆ. ಹಿಂದಿ. ತಮಿಳು ಹಾಗೂ ಹಿಂದಿ ಪ್ರೇಕ್ಷಕರು ರಾಕಿಂಗ್ ಸ್ಟಾರ್ ಯಶ್ ಗೆ ಸಲಾಂ ಅಂತಿದ್ದಾರೆ.

ಇದೀಗ ಯಶ್ ಕೆಜಿಎಫ್ ಚಿತ್ರವನ್ನು ನೋಡಿದ ಬಾಲಿವುಡ್ ನಟಿ ರವೀನಾ ಟಂಡನ್ ಸಂತಸ ವ್ಯಕ್ತಪಡಿಸಿದ್ದಾರೆ. ಕೆಜಿಎಫ್ ನೋಡಲೇಬೇಕಾದ ಸಿನಿಮಾ. ದೇಶದಾದ್ಯಂತ ಸಿನಿಮಾ ಆರ್ಭಟಿಸುತ್ತಿದೆ. ನಿಜಕ್ಕೂ ಅದ್ಭುತ ನಟನೆ. ಯಶ್ ನೀವಂತೂ ಬ್ರಿಲಿಯೆಂಟ್ ಎಂದು ಟ್ವೀಟ್ ಮಾಡಿದ್ದಾರೆ.

ರವೀನಾ ಟಂಡನ್ ಅವರ ಈ ಟ್ವೀಟ್ ಗೆ ಯಶ್ ಕೂಡ ಪ್ರತಿಕ್ರಿಯೆ ನೀಡಿದ್ದು ರವೀನಾಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಜೊತೆಗೆ ಕೆಜಿಎಫ್ ಚಿತ್ರಕ್ಕೆ ಬೆಂಬಲವಾಗಿ ನಿಂತು ಸಹಾಯ ಮಾಡಿದ ಅನಿಲ್ ತದಾನಿಗೂ ಯಶ್ ಥ್ಯಾಂಕ್ಸ್ ಹೇಳಿದ್ದಾರೆ.
ರವೀನಾ ಟಂಡನ್ ಅವರು ರಿಯಲ್ ಸ್ಟಾರ್ ಉಪೇಂದ್ರ ನಟಿಸಿ ನಿರ್ದೇಶಿಸಿದ್ದ ಉಪೇಂದ್ರ ಚಿತ್ರದಲ್ಲಿ ಅಭಿನಯಿಸಿದ್ದರು.

No Comments

Leave A Comment