Log In
BREAKING NEWS >
ಸ್ಯಾಂಡಲ್ ವುಡ್ ನಟ ದರ್ಶನ್ ಮನೆ, ಕಚೇರಿ ಮೇಲೆ ಕಲ್ಲು ತೂರಾಟ,ಕಲ್ಲು ತೂರಾಟ ನಡೆಸಿದ ಪರಿಣಾಮ ಕಾರಿನ ಗಾಜು ಒಡೆದಿದ್ದು, ದುಷ್ಕರ್ಮಿಗಳು...

ಸಿಂಧು ಐತಿಹಾಸಿಕ ಜಯ;ಬಿಡಬ್ಲ್ಯುಎಫ್ ವಿಶ್ವ ಟೂರ್‌ ಫೈನಲ್ಸ್‌ ಕಿರೀಟ

ಗ್ವಾಂಗ್‌ಜೌ: “ಬಿಡಬ್ಲ್ಯುಎಫ್ ವಿಶ್ವ ಟೂರ್‌ ಫೈನಲ್ಸ್‌’ ಬ್ಯಾಡ್ಮಿಂಟನ್‌ ಕೂಟದಲ್ಲಿ ಪಿ.ವಿ. ಸಿಂಧು ಅವರು ಭಾನುವಾರ ನಡೆದ ರೋಚಕ ಪಂದ್ಯದಲ್ಲಿ ಪ್ರಬಲ ಸ್ಪರ್ಧಿ ಜಪಾನ್‌ನ ನೊಜೊಮಿ ಒಕುಹಾರ ವಿರುದ್ಧ ಜಯ ದಾಖಲಿಸಿ ಪ್ರಶಸ್ತಿ ತನ್ನದಾಗಿಸಿಕೊಂಡು ಸಂಭ್ರಮಿಸಿದ್ದಾರೆ. ಬಿಡಬ್ಲ್ಯುಎಫ್ ಪ್ರಶಸ್ತಿ ಗೆದ್ದ ಮೊದಲ ಭಾರತಿಯ ಆಟಗಾರ್ತಿ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.

ಗೆಲುವಿನ ಓಟ ಮುಂದವರಿಸಿದ 23 ರ ಹರೆಯದ ಸಿಂಧು ಭರ್ಜರಿ ಆಟವಾಡಿ 21-19, 21-17 ನೇರ ಸೆಟ್‌ಗಳ ಜಯ ತನ್ನದಾಗಿಸಿಕೊಂಡು ಮತ್ತೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಮಿಂಚಿದ್ದಾರೆ.

ಸಿಂಧು ಎರಡನೇ ಬಾರಿಗೆ ಈ ಕೂಟದ ಫೈನಲ್‌ ಪ್ರವೇಶಿಸಿದ್ದರು. ಕಳೆದ ಆವೃತ್ತಿಯಲ್ಲಿ ರನ್ನರ್‌ ಆಪ್‌ ಆಗಿದ್ದರು.

No Comments

Leave A Comment