Log In
BREAKING NEWS >
Smriti Irani says writing on the wall for Rahul Gandhi...

ಮಿಜೋರಾಂ : ಮುಖ್ಯಮಂತ್ರಿಯಾಗಿ ಝೋರಮ್‌ ಥಂಗಾ ಪ್ರಮಾಣವಚನ

ಐಜ್‌ವಾಲ್‌: ಮಿಜೋರಾಂನ ನೂತನ ಮುಖ್ಯಮಂತ್ರಿಯಾಗಿ ಝೋರಮ್‌ ಥಂಗಾ ಅವರು ಶನಿವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಐಜ್‌ವಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ರಾಜಶೇಖರನ್‌ ಅವರು ಝೋರಮ್‌ ಅವರಿಗೆ ಪ್ರಮಾಣವಚನ ಬೋಧಿಸಿದರು. ಮಿಜೋ ಭಾಷೆಯಲ್ಲೆ ಪ್ರಮಾಣ ವಚನ ಸ್ವೀಕರಿಸಿದರು.

40 ಸದಸ್ಯ ಬಲದ ವಿಧಾನಸಭೆಯಲ್ಲಿ ಝೋರಂ ಥಂಗಾ ನಾಯಕತ್ವದ ಮಿಜೋ ನ್ಯಾಷನಲ್‌ ಫ್ರಂಟ್‌ 26 ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರ ಹಿಡಿದಿತ್ತು. ಕಾಂಗ್ರೆಸ್‌ 5 ಸ್ಥಾನಗಳಿಗೆ ಮಾತ್ರ ತೃಪ್ತಿ ಪಟ್ಟು ಅಧಿಕಾರ ಕಳೆದುಕೊಂಡಿತ್ತು.

84 ರ ಹರೆಯದ ಥಾಂಗಾ ಅವರು 1998 ರಿಂದ 2008 ರ ವರೆಗೆ 10 ವರ್ಷಗಳ ಕಾಲ ಮಿಜೋರಾಂನ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ ಅನುಭವಿ ರಾಜಕಾರಣಿಯಾಗಿದ್ದಾರೆ.

No Comments

Leave A Comment