Log In
BREAKING NEWS >
ನಡೆದಾಡುವ ದೇವರು “ಸಿದ್ದಗಂಗಾಶ್ರೀ” ಶಿವೈಕ್ಯ......ಜನವರಿ 25ಕ್ಕೆ ಬೆಳಿಗ್ಗೆ 9.30ಕ್ಕೆ ಉಡುಪಿಯ ಟಿ ಎ೦ ಎ ಪೈ ಹಿ೦ಬದಿಯಲ್ಲಿನ ಸ್ಥಳದಲ್ಲಿ ನೂತನ "ನಯಾಬ್ "ವಸತಿ ಸಮುಚ್ಚಾಯದ ಶಿಲಾನ್ಯಾಸ ಜರಗಲಿದೆ

ಮನೆಯಲ್ಲಿ 80ರ ತಾಯಿಗೆ ಬೀಗಹಾಕಿ ಹೋದ ಮಗ; ಹಸಿವಿನಿಂದ ತಾಯಿ ಸಾವು

ಶಹಜಹಾನ್‌ಪುರ, ಉತ್ತರ ಪ್ರದೇಶ : 80 ವರ್ಷ ಪ್ರಾಯದ ತನ್ನ ತಾಯಿಯನ್ನು ಆಕೆಯ ಪುತ್ರನೇ ಮನೆಯಲ್ಲಿ ಕೂಡಿ ಹಾಕಿ ಬೀಗ ಹಾಕಿ ಹೋದ ಕಾರಣ ಆಕೆ ಹಸಿವಿನಿಂದ ಮೃತ ಪಟ್ಟ ಹೃದಯವಿದ್ರಾವಕ ಘಟನೆ ವರದಿಯಾಗಿದೆ.

ಮೃತ ವೃದ್ಧೆ ಯ ಪುತ್ರ ಸಲೀಲ್‌ ಚೌಧರಿ ರೈಲ್ವೇ ನೌಕರ. ಆತನಿಗೆ ರೈಲ್ವೆಯಿಂದ ಮನೆ ಸಿಕ್ಕಿತ್ತು. 80ರ ವೃದ್ಧ ತಾಯಿಯನ್ನು ಆತ ಮನೆಯಲ್ಲಿ ಕೂಡಿ ಹಾಕಿ ಬೀಗ ಹಾಕಿ ಹೋಗಿದ್ದ. ಮನೆಯಿಂದ ದುರ್ನಾತ ಬರುತ್ತಿರುವುದನ್ನು ಗಮನಿಸಿದ ನೆರೆಕರೆಯವರು ಪೊಲೀಸರಿಗೆ ದೂರು ನೀಡಿದರು.

ಪೊಲೀಸರು ವೃದ್ಧೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಹಸಿವಿನಿಂದಲೇ ಆಕೆಯ ಸಾವು ಸಂಭವಿಸಿರುವುದನ್ನು ಶಂಕಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತನಿಖೆ ನಡೆಯುತ್ತಿದೆ.

No Comments

Leave A Comment