Log In
BREAKING NEWS >
ಸ್ಯಾಂಡಲ್ ವುಡ್ ನಟ ದರ್ಶನ್ ಮನೆ, ಕಚೇರಿ ಮೇಲೆ ಕಲ್ಲು ತೂರಾಟ,ಕಲ್ಲು ತೂರಾಟ ನಡೆಸಿದ ಪರಿಣಾಮ ಕಾರಿನ ಗಾಜು ಒಡೆದಿದ್ದು, ದುಷ್ಕರ್ಮಿಗಳು...

ಕಾರಿಗೆ ಬೈಕ್‌ ಸವರಿತೆಂಬ ಕಾರಣಕ್ಕೆ ಸವಾರನನ್ನು ಗುಂಡಿಕ್ಕಿ ಕೊಂದರು

ಹೊಸದಿಲ್ಲಿ : ಕಾರಿಗೆ ಬೈಕ್‌ ಸವರಿತೆಂಬ ಕಾರಣಕ್ಕೆ ಉಂಟಾದ ಜಗಳದ ಪರಾಕಾಷ್ಠೆಯಲ್ಲಿ ಬೈಕ್‌ ಸವಾರನನ್ನು ಗುಂಡಿಕ್ಕಿ ಕೊಲ್ಲಲಾದ ಘಟನೆ ಇಲ್ಲಿನ ಮಯೂರ್‌ ವಿಹಾರ್‌ ಫಾಸೆಲ್‌ ಪಾಂಡವ ನಗರದ ಪೊಲೀಸ್‌ ಠಾಣೆ ವ್ಯಾಪ್ತಿ ಪ್ರದೇಶದಲ್ಲಿ ನಡೆದಿದೆ.

ರಸ್ತೆ ಅಕ್ರೋಶದಲ್ಲಿ ಕೊಲ್ಲಲ್ಪಟ್ಟ ಬೈಕ ಸವಾರನನ್ನು ಯೋಗೇಶ್‌ ಎಂದು ಗುರುತಿಸಲಾಗಿದೆ. 20ರ ಹರೆಯದ ಈತ ಸಾಮಾನು ಖರೀದಿಸಲೆಂದು ಸ್ಟೋರ್‌ಗೆ ಹೋಗಿದ್ದ. ಬೈಕ್‌ ಪಾರ್ಕ್‌ ಮಾಡುವಾಗ ಅದು ಆರೋಪಿ ಕೊಲೆಗಾರನ ಕಾರಿಗೆ ಸವರಿತು.

ಪರಿಣಾಮವಾಗಿ ಮಾತಿನ ಜಗಳ ಉಂಟಾಯಿತು. ಜಗಳದ ಪರಾಕಾಷ್ಠೆಯಲ್ಲಿ ಕಾರಿನಲ್ಲಿದ್ದ ಇಬ್ಬರು ಯೋಗೇಶ್‌ನನ್ನು ಗುಂಡಿಕ್ಕಿ ಕೊಂದು ಕೂಡಲೇ ಅಲ್ಲಿಂದ ಪರಾರಿಯಾದರು.

ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಅಂತೆಯೇ ಈ ಘಟನೆಯ ದೃಶ್ಯಾವಳಿಗಾಗಿ ಈ ಪ್ರದೇಶದಲ್ಲಿನ ಸಿಸಿಟಿವಿಯನ್ನು ಪರಿಶೀಲಿಸುತ್ತಿದ್ದಾರೆ.

No Comments

Leave A Comment