Log In
BREAKING NEWS >
ಸ್ಯಾಂಡಲ್ ವುಡ್ ನಟ ದರ್ಶನ್ ಮನೆ, ಕಚೇರಿ ಮೇಲೆ ಕಲ್ಲು ತೂರಾಟ,ಕಲ್ಲು ತೂರಾಟ ನಡೆಸಿದ ಪರಿಣಾಮ ಕಾರಿನ ಗಾಜು ಒಡೆದಿದ್ದು, ದುಷ್ಕರ್ಮಿಗಳು...

ವೆಬ್ ಹುಡುಕಾಟ: 2018ರಲ್ಲಿ ಸನ್ನಿ ಲಿಯೋನ್ ಅತಿ ಹೆಚ್ಚು ಸರ್ಚಾದ ಮಹಿಳಾ ಸೆಲೆಬ್ರಿಟಿ!

ನವದೆಹಲಿ: ಬಾಲಿವುಡ್ ಹಾಟ್ ಬೆಡಗಿ ಸನ್ನಿ ಲಿಯೋನ್, ವೆಬ್  ಹುಡುಕಾಟದಲ್ಲಿ  ಮತ್ತೆ  ಮೊದಲ ಸ್ಥಾನವನ್ನು   ಪಡೆದುಕೊಂಡಿದ್ದಾರೆ.  ಈ ವರ್ಷ ಸರ್ಚಾದ ಹೆಚ್ಚು  ಭಾರತೀಯ ಮಹಿಳಾ ಸೆಲೆಬ್ರಿಟಿಗಳ ಪೈಕಿ 37 ವರ್ಷದ ಸನ್ನಿ ಲಿಯೋನ್  ಮೊದಲಿಗರಾಗಿದ್ದಾರೆ.

ಯಾಹೂ! ಬಿಡುಗಡೆ ಮಾಡಿರುವ  ಈ ವರ್ಷದ  ಇಯರ್ ಇನ್ ರಿವ್ಯೂ ಲಿಸ್ಟ್’ ಪಟ್ಟಿಯಲ್ಲಿ   ಪಡ್ಡೆ ಹುಡುಗರ ನೆಚ್ಚಿನ ನಟಿಯಾಗಿರುವ ಸನ್ನಿ ಲಿಯೋನ್ ಅವರೇ ಹೆಚ್ಚಾಗಿ ಸರ್ಜ್ ಆಗಿದ್ದಾರೆ.

ಕೆನಡಿಯನ್ ಮೂಲಕ  ಮೂಲದ ಬಾಲಿವುಡ್ ನಟಿ ಸನ್ನಿ ಲಿಯೋನ್ ನಂತರ  ನಟಿ  ಶ್ರೀದೇವಿ ಹಾಗೂ ಪ್ರಿಯಾ ಪ್ರಕಾಶ್ ವಾರಿಯರ್  ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನದಲ್ಲಿದ್ದಾರೆ. 

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಗಾಯಕಿ ಸಪ್ನಾ ಚೌದರಿ  ಕ್ರಮವಾಗಿ ನಾಲ್ಕು ಹಾಗೂ ಐದನೇ ಸ್ಥಾನದಲ್ಲಿದ್ದಾರೆ.

ಗೊಗಲ್ ಝೀಟ್ಜಿಸ್ಟ್, ಪ್ರಕಾರ, 2017ರಲ್ಲಿಯೂ ಸನ್ನಿ ಲಿಯೋನ್  ಬಗ್ಗೆ ವೆಬ್ ಪೋರ್ಟಲ್ ಹೆಚ್ಚು ಜನರು ಹುಡುಕಾಟ ನಡೆಸಿದ್ದರು. ಆದರೆ, 2018 ಫೆಬ್ರವರಿಯಲ್ಲಿ ಕೇರಳ ಮೂಲದ ಪ್ರಿಯಾ ಪ್ರಕಾಶ್ ವಾರಿಯರ್ , ರಾತ್ರೋರಾತ್ರಿ  ಪ್ರಸಿದ್ಧಿಗೆ ಬರುವ ಮೂಲಕ  ಸನ್ನಿ ಲಿಯೋನ್ ಅವರನ್ನು ಎರಡನೇ ಸ್ಥಾನಕ್ಕೆ ತಳ್ಳಿ ತಾನೂ ಮೊದಲ ಸ್ಥಾನ ಪಡೆದುಕೊಂಡಿದ್ದರು.ಈ ಮಧ್ಯೆ ಸನ್ನಿ ಲಿಯೋನ್  ಇನ್ಸಾಟಾಗ್ರಾಮ್ ನಲ್ಲಿ 16.8 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದರೆ, ಪ್ರಿಯಾಂಕಾ ಚೋಪ್ರಾ 32.3 ಹಾಗೂ ಪ್ರಿಯಾ ವಾರಿಯಾರ್ ಕೇವಲ 6.3 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ.

No Comments

Leave A Comment