Log In
BREAKING NEWS >
ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ರಾಜಸ್ಥಾನ ಚುನಾವಣೆ:ಫ‌ತೇಪುರ ಸಿಕಾರ್‌ನಲ್ಲಿ ಹಠಾತ್‌ ಭುಗಿಲೆದ್ದ ಹಿಂಸೆ

ಜೈಪುರ : ಶಾಂತ ರೀತಿಯಲ್ಲಿ ಸಾಗುತ್ತಿದ್ದ ರಾಜಸ್ಥಾನ ವಿಧಾನಸಭಾ ಚುನಾವಣೆ ಮಧ್ಯಾಹ್ನದ ವೇಳೆಗೆ ಹಠಾತ್‌ ಹಿಂಸೆಯನ್ನು ಕಂಡಿದೆ.

ಫ‌ತೇಪುರದ ಸಿಕಾರ್‌ ನಲ್ಲಿ ಮತದಾನ ನಡೆಯುತ್ತಿದ್ದ ಸುಭಾಷ್‌ ಸ್ಕೂಲ್‌ನಲ್ಲಿ ಇದ್ದಕ್ಕಿದ್ದಂತೆಯೇ ಹಿಂಸೆ ಸಂಭವಿಸಿತು. ಉದ್ರಿಕ್ತ ಜನರು ವಾಹನಗಳಿಗೆ ಬೆಂಕಿ ಹಚ್ಚಿ ಸೊತ್ತುಗಳನ್ನು ಧ್ವಂಸಗೊಳಿಸಿದರು.

ಮಧ್ಯಾಹ್ನ 3 ಗಂಟೆಯ ಬಳಿಕ ನಡೆದ ಈ ಘಟನೆಯ ಮಾಹಿತಿ ಪಡೆದ ಹೆಚ್ಚುವರಿ ಭದ್ರತಾ ಸಿಬಂದಿಗಳು ಸ್ಥಳಕ್ಕೆ ಧಾವಿಸಿ ಬಂದು ದುಷ್ಕರ್ಮಿಗಳನ್ನು ವಶಕ್ಕೆ ತೆಗೆದುಕೊಂಡರು.

ಈ ಹಠಾತ್‌ ಹಿಂಸೆ, ಗಲಭೆಯಿಂದಾಗಿ ಸುಮಾರು 30 ನಿಮಿಷಗಳ ಕಾಲ ಮತದಾನವನ್ನು ಅಮಾನತುಗೊಳಿಸಲಾಯಿತು.

ಹಿಂಸೆ ಸ್ಫೋಟಗೊಳ್ಳಲು ಕಾರಣವೇನೆಂದು ತತ್‌ಕ್ಷಣಕ್ಕೆ ಗೊತ್ತಾಗಿಲ್ಲ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದು ಮತದಾನ ಮತ್ತೆ ಮುಂದುವರಿದಿದೆ. ಹೆಚ್ಚಿನ ಭದ್ರತಾ ಸಿಬಂದಿಗಳು ಇಲ್ಲಿ ಕರ್ತವ್ಯ ನಿರತರಾಗಿದ್ದಾರೆ.

ಮಧ್ಯಾಹ್ನ 1 ಗಂಟೆಯ ವರೆಗಿನ ಅವಧಿಯಲ್ಲಿ ಶೇ.41.53 ಮತದಾನ ನಡೆದಿರುವುದು ದಾಖಲಾಗಿದೆ.

No Comments

Leave A Comment