ನಾಗಪಟ್ಟಣಂ: ಗಜಾ ಚಂಡ ಮಾರುತದಿಂದ ತತ್ತರಿಸಿ ಹೋಗಿದ್ದ ಪ್ರದೇಶಗಳ ವೀಕ್ಷಣೆಗೆಂದು ಬಂದಿದ್ದ ಸಚಿವ ಓ.ಎಸ್.ಮಣಿಯನ್ ಅವರ ಕಾರಿನ ಮೇಲೆ ಉದ್ರಿಕ್ತರು ಕತ್ತಿಯಿಂದ ದಾಳಿ ಮಾಡಿದ ಘಟನೆ ಶುಕ್ರವಾರ ನಡೆದಿದೆ.
ಉದ್ರಿಕ್ತರು ಸಚಿವರ ಕಾರಿಗೆ ಮುತ್ತಿಗೆ ಹಾಕಿದ್ದು ಸೂಕ್ತ ಪರಿಹಾರ ನೀಡಬೇಕು ಎಂದು ಆಕ್ರೋಶ ಹೊರ ಹಾಕಿದ್ದಾರೆ. ಉದ್ರಿಕ್ತರಲ್ಲಿ ಓರ್ವ ಕಾರಿನ ಮೇಲೆ ಕತ್ತಿಯಿಂದ ದಾಳಿ ನಡೆಸಿದ್ದಾನೆ.
ಘಟನೆ ಸಂಬಂಧ 6 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಚಿವರಿಗೆ ಯಾವುದೇ ಹಾನಿಯಾಗಿಲ್ಲ.