ನನ್ನ ಪತಿ, ಮಗಳೊಂದಿಗೆ ರೂಮಿನಲ್ಲಿ ಮಲಗಿದ್ದರು. ಇದ್ದಕ್ಕಿದ್ದಂತೆ ಒಳಬಂದು ಅವರನ್ನು ಬಂಧನಕ್ಕೊಳಪಡಿಸಿದರು. ನಾವೇನೂ ಉಗ್ರರೇ? ನಮ್ಮೊಂದಿಗೆ ಈ ರೀತಿ ನಡೆದುಕೊಳ್ಳಲು ಎಂದು ಪ್ರಶ್ನಿಸಿದ್ದಾರೆ. ಈ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಪೊಲೀಸರು ಚುನಾವಣಾ ಆಯೋಗದ ಆದೇಶದ ಮೇರೆಗೆ ರೆಡ್ಡಿಯವರನ್ನು ಬಂಧನಕ್ಕೊಳಪಡಿಸಲಾಗಿದೆ. ತಮ್ಮ ಕ್ಷೇತ್ರದ ಜನರಿಗೆ ಟಿಆರ್’ಎಸ್ ಮುಖ್ಯಸ್ಥನ ಸಭೆಯನ್ನು ಬಹಿಷ್ಕರಿಸಿ, ಪ್ರತಿಭಟನೆ ನಡೆಸುವಂತೆ ರೆಡ್ಡಿ ಕರೆ ನೀಡಿದ್ದ ಹಿನ್ನಲೆಯಲ್ಲಿ ಆಯೋಗ ಬಂಧನಕ್ಕೊಳಪಡಿಸುವಂತೆ ಆದೇಶಿಸಿತ್ತು ಎಂದು ತಿಳಿಸಿದ್ದಾರೆ. ಕಳೆದ ನಾಲ್ಕೂವರೆ ವರ್ಷಗಳಿಂದಲೂ ಕೊಡಂಗಲ್ ವಿಧಾನಸಭಾ ಕ್ಷೇತ್ರ ಅಭಿವೃದ್ಧಿಗೊಂಡಿಲ್ಲ. ಕೊಡಂಗಲ್’ಗೆ ಡಿ.4 ರಂದು ಕೆಸಿಆರ್ ಭೇಟಿ ನೀಡುತ್ತಿದ್ದು, ಭೇಟಿಗೂ ಮುನ್ನ ಕ್ಷಮೆಯಾಚಿಸಬೇಕೆಂದು ಈ ಹಿಂದೆ ರೇವಂತ್ ರೆಡ್ಡಿ ಆಗ್ರಹಿಸಿದ್ದರು
ಅನಾರೋಗ್ಯದಿಂದಾಗಿ ಶೇಷಾದ್ರಿಪುರಂನಲ್ಲಿರುವ ಅಪೋಲೋ ಆಸ್ಪತ್ರೆಗೆ ಬಾಬು ಅವರು ಕೆಲ ದಿನಗಳ ಹಿಂದಷ್ಟೇ ದಾಖಲಾಗಿದ್ದರು. ಇದೀಗ ಚಿಕಿತ್ಸೆ
ಫಲಕಾರಿಯಾಗದೆ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.
ನಿರ್ದೇಶಕ ಪ್ರೇಮ್ ಸೇರಿದಂತೆ ಹಲವರಿಗೆ ಗುರುವಾಗಿದ್ದ ಬಾಬು ಅವರು, ಹಲೋ ಯಮ, ಚಮ್ಕಾಯಿಸಿ ಚಿಂದಿ ಉಡಾಯ್ಸಿ, ಸಪ್ನೋಂಕಿ ರಾಣಿ ಸೇರಿದಂತೆ ಹಲವು ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದರು.
ಚರಣ್ ರಾಜ್, ಚಾರುಲತಾ ಹಾಗೂ ಧೀರೇಂದ್ರ ಗೋಪಾಲ್ ಮುಖ್ಯಭೂಮಿಕೆಯಲ್ಲಿ 1998ರಲ್ಲಿ ತೆರೆ ಕಂಡಿದ್ದ ಚೋರ್ ಗುರು ಚಾಂಡಾಲ್ ಶಿಷ್ಯ ಬಾಬು ಅವರ ಮೊದಲ ಚಿತ್ರವಾಗಿದ್ದು.