Log In
BREAKING NEWS >
ಸ್ಯಾಂಡಲ್ ವುಡ್ ನಟ ದರ್ಶನ್ ಮನೆ, ಕಚೇರಿ ಮೇಲೆ ಕಲ್ಲು ತೂರಾಟ,ಕಲ್ಲು ತೂರಾಟ ನಡೆಸಿದ ಪರಿಣಾಮ ಕಾರಿನ ಗಾಜು ಒಡೆದಿದ್ದು, ದುಷ್ಕರ್ಮಿಗಳು...

ವಾಯುವ್ಯ ಪಾಕಿಸ್ಥಾನದಲ್ಲಿ ಬಾಂಬ್‌ ದಾಳಿ : 25 ಮಂದಿ ಬಲಿ,ಹಲವರು ಗಂಭೀರ

ಇಸ್ಲಮಾಬಾದ್‌: ವಾಯುವ್ಯ ಪಾಕಿಸ್ಥಾನದ ಖೈಬರ್‌ ಪಖ್‌ತುಖ್ವಾ ಪ್ರಾಂತ್ಯದ ಜನನಿಭಿಡ ಮಾರಕಟ್ಟೆಯೊಂದರಲ್ಲಿ  ಶುಕ್ರವಾರ  ಬಾಂಬ್‌ ಸ್ಫೋಟ ನಡೆಸಲಾಗಿದೆ. ದಾಳಿಯ ತೀವ್ರತೆಗೆ  25 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು 35ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಶಿಯಾ ಮುಸ್ಲಿಮರಿಗೆ ಸೇರಿದ ಧಾರ್ಮಿಕ ಕೇಂದ್ರವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ಮೃತರ ಪೈಕಿ ಹೆಚ್ಚಿನವರು ಶಿಯಾ ಮುಸ್ಲಿಮರಾಗಿದ್ದು, ಶುಕ್ರವಾರದ ಪ್ರಾರ್ಥನೆಗೆಂದು ಬಂದಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.

ಪ್ರಾಂತ್ಯದಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದ್ದು, ಸ್ಥಳಕ್ಕೆ ಭದ್ರತಾ ಪಡೆಗಳು ದೌಡಾಯಿಸಿ ಕಟ್ಟೆಚ್ಚರ ವಹಿಸಿವೆ.

ಶುಕ್ರವಾರ ಬೆಳಗ್ಗೆ ಚೀನಾ ಕಾನ್ಸುಲೆಟ್‌ ಕಚೇರಿಯನ್ನು ಗುರಿಯಾಗಿರಿಸಿಕೊಂಡು ಉಗ್ರರು ದಾಳಿ ನಡೆಸಿದ ಬೆನ್ನಲ್ಲೇ ಈ ಭೀಕರ ದಾಳಿ ನಡೆದಿದೆ.

No Comments

Leave A Comment