Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಭಾರತ ವಿರುದ್ಧ ಆಸೀಸ್‌ ಟೆಸ್ಟ್‌ ತಂಡ ಪ್ರಕಟ: ಮಾರ್ಕಸ್‌ ಗೆ ಕ್ಯಾಪ್‌

ಸಿಡ್ನಿ : ಹೊಸಬ ಆರಂಭಿಕ ಬ್ಯಾಟ್ಸ್‌ಮ್ಯಾನ್‌ ಮಾರ್ಕಸ್‌ ಹ್ಯಾರಿಸ್‌ ಅವರನ್ನು ಭಾರತದ ವಿರುದ್ಧ ಮೊದಲ ಎರಡು ಟೆಸ್ಟ್‌ ಪಂದ್ಯಗಳ ಹದಿನಾಲ್ಕು ಸದಸ್ಯರ ಆಸ್ಟ್ರೇಲಿಯ ಕ್ರಿಕೆಟ್‌ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಯ ಮೊದಲ ಪಂದ್ಯ ಜನವರಿ 3ರಂದು ಸಿಡ್ನಿ ಕ್ರಿಕೆಟ್‌ ಗ್ರೌಂಡ್‌ ನಲ್ಲಿ ನಡೆಯಲಿದೆ.

ಹ್ಯಾರಿಸ್‌ ಅವರು ಈ  ಬೇಸಗೆಯ ಜೆಎಲ್‌ಟಿ ಶೆಫೀಲ್ಡ್‌ ಶೀಲ್ಡ್‌ ನಲ್ಲಿ  ವಿಕ್ಟೋರಿಯ ತಂಡದ ಪರವಾಗಿ ಭರ್ಜರಿ 437 ರನ್‌ ಬಾರಿಸಿ ಮಿಂಚಿರುವುದೇ ಅವರನ್ನು ರಾಷ್ಟ್ರೀಯ ತಂಡಕ್ಕೆ ಸೇರಿಸಿಕೊಳ್ಳಲು ಕಾರಣವೆಂದು ಹೇಳಲಾಗಿದೆ.

ಇದೇ ವೇಳೆ ಹ್ಯಾರಿಸ್‌ ಅವರ ವಿಕ್ಟೋರಿಯ ತಂಡದ ಸಹೋದ್ಯೋಗಿ ಪೀಟರ್‌ ಹ್ಯಾನ್ಸ್‌ಕಾಂಬ್‌ ಅವರು ಮರಳಿ ರಾಷ್ಟ್ರೀಯ ತಂಡವನ್ನು ಸೇರಿಕೊಂಡಿದ್ದಾರೆ. ಈಚೆಗೆ ಯುಎಇ ಯಲ್ಲಿ ನಡೆದಿದ್ದ ಪಾಕ್‌ ವಿರುದ್ಧ ಟೆಸ್ಟ್‌ ಸರಣಿಯಿಂದ ಹ್ಯಾನ್ಸ್‌ಕಾಂಬ್‌ ವಂಚಿತರಾಗಿದ್ದರು.

14 ಸದಸ್ಯರ ಆಸೀಸ್‌ ಟೆಸ್ಟ್‌ ತಂಡ ಇಂತಿದೆ : 

ಆರನ್‌ ಫಿಂಚ್‌, ಪ್ಯಾಟ್‌ ಕ್ಯುಮಿನ್ಸ್‌, ಪೀಟರ್‌ ಹ್ಯಾನ್ಸ್‌ಕಾಂಬ್‌, ಮಾರ್ಕಸ್‌ ಹ್ಯಾರಿಸ್‌, ಜೋಷ್‌ ಹೆಜೆಲ್‌ವುಡ್‌ (ವಿಕೆಟ್‌ ಕೀಪರ್‌), ಟ್ರ್ಯಾವಿಸ್‌ ಹೆಡ್‌, ಉಸ್ಮಾನ್‌ ಖ್ವಾಜಾ, ನೆಥನ್‌ ಲಿಯೋನ್‌, ಮಿಚ್‌ ಮಾರ್ಷ್‌ (ವಿಕೆಟ್‌ ಕೀಪರ್‌), ಶಾನ್‌ ಮಾರ್ಷ್‌, ಟಿಮ್‌ ಪೇನ್‌ (ನಾಯಕ,ವಿಕೆಟ್‌ ಕೀಪರ್‌), ಮಿಚೆಲ್‌ ಸ್ಟಾರ್ಕ್‌, ಕ್ರಿಸ್‌ ಟ್ರೆಮೇನ್‌, ಪೀಟರ್‌ ಸಿಡ್ಲ್.

No Comments

Leave A Comment