Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಮೀನು ನಿಷೇಧ; ಗೋವಾಕ್ಕೆ ನಿಯೋಗ: ಜಯಮಾಲಾ

ಕುಂದಾಪುರ: ಮೀನು ಸಂರಕ್ಷಣೆಗೆ ರಾಸಾಯನಿಕ ಬಳಸುವ ಶಂಕೆಯಿಂದ ಗೋವಾ ರಾಜ್ಯವು ವಿಧಿಸಿರುವ ನಿಷೇಧವನ್ನು ಶೀಘ್ರ ತೆರವುಗೊಳಿಸದಿದ್ದಲ್ಲಿ ಅಲ್ಲಿಗೆ ಸಚಿವರ ನಿಯೋಗದೊಂದಿಗೆ ತೆರಳಿ ಮಾತುಕತೆ ನಡೆಸುವುದಾಗಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ| ಜಯಮಾಲಾ ತಿಳಿಸಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ನೆಗಡಿಯಾಗಿದೆ ಎಂದು ಮೂಗು ಕೊಯ್ದು ಕೊಳ್ಳಬಾರದು. ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆ ಕೊಡಲಿ. ಬದಲಾಗಿ ಎಲ್ಲ ಮೀನಿಗೂ ನಿಷೇಧ‌ ಸರಿಯಲ್ಲ. ಈ ಬಗ್ಗೆ ಈಗಾಗಲೇ ಸಚಿವರಾದ ವೆಂಕಟ್ರಾವ್‌ ನಾಡಗೌಡ, ಯು.ಟಿ. ಖಾದರ್‌ ಜತೆ ಮಾತುಕತೆ ನಡೆಸಲಾಗದೆ. ಇಂತಹ ನಿಷೇಧ ಮೀನುಗಾರರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದರು.

ಮರಳು: ಅಧ್ಯಾದೇಶ ತರಲಾಗದು
ಮರಳುಗಾರಿಕೆ ಕುರಿತು ಪ್ರತಿಕ್ರಿಯಿಸಿದ ಸಚಿವೆ, ಸಿಆರ್‌ಝಡ್‌ ನಿಯಮ ತಿದ್ದುಪಡಿಗೆ ನಾವು ಅಧ್ಯಾದೇಶ ತರುವಂತಿಲ್ಲ. ಕೇಂದ್ರವೇ ನೀತಿ ನಿಯಮ ತಿದ್ದುಪಡಿ ಮಾಡಬೇಕು. ಇಲ್ಲಿ ಪ್ರತಿಭಟಿಸುವ ಘಟಾನುಘಟಿಗಳ ಸರಕಾರ ಕೇಂದ್ರದಲ್ಲಿದ್ದು, ಅವರು ಪ್ರಯತ್ನಿಸಲಿ. ನಾವು ಸರಕಾರದ ವತಿಯಿಂದ ಕೇಂದ್ರದ ಮೇಲೆ ಒತ್ತಡ ಹೇರಿ ದ್ದೇವೆ. ಇದರಲ್ಲಿ ರಾಜಕಾರಣ ಇಲ್ಲ. ಜಿಲ್ಲೆಯ ಅಭಿವೃದ್ಧಿಯಾಗಬೇಕು ಎನ್ನುವುದಷ್ಟೇ ನಮ್ಮ ಉದ್ದೇಶ ಎಂದರು.

ಮರಳಿಗೆ ಸಂಬಂಧಿಸಿದಂತೆ ಡಿಸಿ ಪೂರಕ ಮಾಹಿತಿ ನೀಡಿ, ಜಿಲ್ಲೆಯಲ್ಲಿ 30 ಸಾಂಪ್ರದಾಯಿಕ ಮರಳು ದಿಬ್ಬಗಳನ್ನು ಗುರುತಿಸಲಾಗಿದೆ. ಕುಂದಾಪುರ ಮತ್ತು ಬೈಂದೂರು ತಾಲೂಕಿನ ಸಿಆರ್‌ಝಡ್‌ ಪ್ರದೇಶದ ನದಿ ಪಾತ್ರಗಳಲ್ಲಿ ಬರುವ ಜೈವಿಕ ಸೂಕ್ಷ್ಮ ಪ್ರದೇಶ ಗಳ ಮಿತಿಯನ್ನು ಕಡಿಮೆಗೊಳಿಸಿ ತಿದ್ದುಪಡಿ ತರುವ ಕುರಿತು ಪತ್ರ ಬರೆಯಲಾಗಿದೆ. ಕೇಂದ್ರದಿಂದ ಉತ್ತರ ಬಂದಿಲ್ಲ. ನಿರ್ಬಂಧ ಮುಂದುವರಿದರೆ ಕುಂದಾಪುರದಲ್ಲಿ ಒಂದೇ ಒಂದು ಮರಳುದಿಬ್ಬ ಗ‌ುರುತಿಸಲಾಗುವುದಿಲ್ಲ ಎಂದರು.

No Comments

Leave A Comment