Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಇಂದಿರಾ ಕ್ಯಾಂಟೀನ್‌ಗಳಲ್ಲಿ ಗಂಜಿ ಊಟ

ಕುಂದಾಪುರ: ಉಡುಪಿ ಜಿಲ್ಲೆಯ ಇಂದಿರಾ ಕ್ಯಾಂಟೀನ್‌ಗಳಲ್ಲಿ ಮಧ್ಯಾಹ್ನ ಗಂಜಿ ಊಟ ಕೊಡಲು ಜಿಲ್ಲಾಧಿಕಾರಿಗಳು ವ್ಯವಸ್ಥೆ ಮಾಡಿದ್ದಾರೆ ಎಂದು ಉಸ್ತುವಾರಿ ಸಚಿವೆ ಡಾ| ಜಯಮಾಲಾ ಹೇಳಿದ್ದಾರೆ.ಅವರು ಬುಧವಾರ ಇಲ್ಲಿನ ಶಾಸ್ತ್ರೀ ವೃತ್ತದಲ್ಲಿ ಇಂದಿರಾ ಕ್ಯಾಂಟೀನ್‌ ಉದ್ಘಾಟಿಸಿ ಮಾತನಾಡಿದರು.

ರಾಜ್ಯದಲ್ಲಿ 500 ಕ್ಯಾಂಟೀನ್‌ ಸ್ಥಾಪಿಸಿ ನಿತ್ಯ 3 ಲಕ್ಷ ಜನರಿಗೆ ಊಟ ಕೊಡುವ ಗುರಿಯಿತ್ತು. ಈಗ 1.4 ಲಕ್ಷ ಜನ ಪ್ರಯೋಜನ ಪಡೆಯುತ್ತಿದ್ದಾರೆ. ಶುಚಿತ್ವ ಹಾಗೂ ಬಿಸಿ ಆಹಾರಕ್ಕೆ ಮಹತ್ವ ನೀಡಲಾಗಿದೆ. ಅನ್ನಭಾಗ್ಯ ಮೂಲಕ ಹಸಿವು ಮುಕ್ತ ಕರ್ನಾಟಕ ನಿರ್ಮಾಣದಂತೆ ಶ್ರಮಿಕ ವರ್ಗವೂ ಹಸಿವುಮುಕ್ತ ಆಗಬೇಕೆಂದು ಕ್ಯಾಂಟೀನ್‌ ಆರಂಭಿಸಲಾಗಿದೆ. ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಎರಡು ಕ್ಯಾಂಟೀನ್‌ಗಳಿದ್ದು, ಕಾರ್ಕಳ, ಕುಂದಾಪುರ ಸಹಿತ ಜಿಲ್ಲೆಯಲ್ಲಿ ನಾಲ್ಕು ಇವೆ. ಕುಂದಾಪುರ ಆಸ್ಪತ್ರೆ ಬಳಿ ಮೊಬೈಲ್‌ ಕ್ಯಾಂಟೀನ್‌ ಆರಂಭಿಸಲಾಗುವುದು ಎಂದರು.

ಪರಿಷತ್‌ ಸದಸ್ಯ ಪ್ರತಾಪಚಂದ್ರ ಶೆಟ್ಟಿ, ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌, ಸಹಾಯಕ ಕಮಿಷನರ್‌ ಟಿ. ಭೂಬಾಲನ್‌, ನಗರ ಕೋಶ ಯೋಜನ ನಿರ್ದೇಶಕ ಅರುಣಪ್ರಭಾ, ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು. ಕ್ಯಾಂಟೀನ್‌ ಉದ್ಘಾಟಿಸಿದ ಸಚಿವರು ಸ್ವತ್ಛತೆ, ಅಡುಗೆ ಕೋಣೆ ಪರಿಶೀಲಿಸಿ ಇತರರಿಗೆ ಉಪಾಹಾರ ಬಡಿಸಿಕೊಟ್ಟು ತಾವೂ ಸೇವಿಸಿದರು. ಉಪ್ಪಿಟ್ಟು, ಕೇಸರಿಭಾತ್‌ ಮಾಡಲಾಗಿತ್ತು.

“ಸದ್ಬಳಕೆ ಮಾಡಿಕೊಳ್ಳಿ’
ಕಾರ್ಕಳ: ಸಮ್ಮಿಶ್ರ ಸರಕಾರದಲ್ಲಿ ಹಿಂದಿನ ಸರಕಾರದ ಎಲ್ಲ ಯೋಜನೆಗಳು ಮುಂದುವರಿಯಲಿವೆ. ಇವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು  ಸಚಿವೆ ಡಾ| ಜಯಮಾಲಾ ಹೇಳಿದರು. ತಾ.ಪಂ. ಸಭಾಂಗಣದಲ್ಲಿ ನಡೆದ ಕಾರ್ಕಳ ವಿಧಾನಸಭಾ ಕ್ಷೇತ್ರದ ವಿವಿಧ ಫ‌ಲಾನುಭವಿಗಳಿಗೆ ಸವಲತ್ತು ವಿತರಿಸಿದ ಅವರು, ಕೋಟಿ-ಚೆನ್ನಯ ಥೀಮ್‌ ಪಾರ್ಕ್‌ನ ಉಳಿದ ಕೆಲಸ ಪೂರ್ಣಗೊಳಿಸಲು ಆದ್ಯತೆ ನೀಡುವುದಾಗಿ ಹೇಳಿದರು.  ಶಾಸಕ ಸುನೀಲ್‌ ಕುಮಾರ್‌ ಉಪಸ್ಥಿತರಿದ್ದರು.

No Comments

Leave A Comment