Log In
BREAKING NEWS >
ಸ್ಯಾಂಡಲ್ ವುಡ್ ನಟ ದರ್ಶನ್ ಮನೆ, ಕಚೇರಿ ಮೇಲೆ ಕಲ್ಲು ತೂರಾಟ,ಕಲ್ಲು ತೂರಾಟ ನಡೆಸಿದ ಪರಿಣಾಮ ಕಾರಿನ ಗಾಜು ಒಡೆದಿದ್ದು, ದುಷ್ಕರ್ಮಿಗಳು...

ಪುಲ್‌ಗಾಂವ್‌ ಸೇನಾ ಡಿಪೊದಲ್ಲಿ ಸ್ಫೋಟ;6 ಸಾವು,ಹಲವರಿಗೆ ಗಂಭೀರ ಗಾಯ

ವಾರ್ಧಾ (ಮಹಾರಾಷ್ಟ್ರ): ಪುಲ್‌ಗಾಂವ್‌ ಸೇನಾ ಡಿಪೋದಲ್ಲಿ ಮಂಗಳವಾರ ಬೆಳಗ್ಗೆ ಭೀಕರ ಸ್ಫೋಟ ಸಂಭವಿಸಿದ್ದು  ಆರು ಮಂದಿ ಸಾವನ್ನಪ್ಪಿದ್ದು , 10 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. 

ಎಎನ್‌ಐ ವರದಿಯಂತೆ ಹಳೆಯ ಶಸ್ತ್ರಾಸ್ತ್ರಗಳನ್ನು ತೆರವು ಗೊಳಿಸುವ ವೇಳೆಯಲ್ಲಿ ಸ್ಫೋಟ ಸಂಭವಿಸಿದೆ. ಮೃತ ದುರ್ದೈವಿಗಳ ಪೈಕಿ ನಾಲ್ವರು ಯುದ್ಧ ಸಾಮಾಗ್ರಿ ಕಾರ್ಖಾನೆಯ ಉದ್ಯೋಗಿಗಳು ಮತ್ತು ಇಬ್ಬರು ಕಾರ್ಮಿಕರು ಎಂದು ತಿಳಿದು ಬಂದಿದೆ. 

ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು , ಕೆಲವರ ಸ್ಥಿತಿ ಚಿಂತಾಜನಕವಾಗಿದೆ.

ಸ್ಫೋಟ ಭಾರೀ ಪ್ರಮಾಣದಲ್ಲಿ ಆಗಿದ್ದು ಭಾರೀ ಸದ್ದು ಸುತ್ತ ಮುತ್ತಲಿನ ಹಳ್ಳಿಗಳಿಗೆ ವ್ಯಾಪಿಸಿತ್ತು. ಕಾರ್ಮಿಕನ ಕೈಯಿಂದ ಬಾಂಬೊಂದು ಕೆಳ ಬಿದ್ದು ಈ ಸ್ಫೋಟ ಸಂಭವಿಸಿದೆ ಎಂದು ತಿಳಿದು ಬಂದಿದೆ. 

ಘಟನೆ ನಡೆಯುವ ವೇಳೆ ಸಮಾರು 15 ಮಂದಿ ಕಾರ್ಮಿಕರು ಸ್ಥಳದಲ್ಲಿದ್ದರು ಎಂದು ತಿಳಿದು ಬಂದಿದೆ. 

ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.  

No Comments

Leave A Comment