Log In
BREAKING NEWS >
ನಡೆದಾಡುವ ದೇವರು “ಸಿದ್ದಗಂಗಾಶ್ರೀ” ಶಿವೈಕ್ಯ......ಜನವರಿ 25ಕ್ಕೆ ಬೆಳಿಗ್ಗೆ 9.30ಕ್ಕೆ ಉಡುಪಿಯ ಟಿ ಎ೦ ಎ ಪೈ ಹಿ೦ಬದಿಯಲ್ಲಿನ ಸ್ಥಳದಲ್ಲಿ ನೂತನ "ನಯಾಬ್ "ವಸತಿ ಸಮುಚ್ಚಾಯದ ಶಿಲಾನ್ಯಾಸ ಜರಗಲಿದೆ

ನಕ್ಸಲ್ ಅಟ್ಟಹಾಸ; ಬಾಂಬ್ ಸ್ಫೋಟಕ್ಕೆ ಯೋಧ ಹುತಾತ್ಮ, 3 ನಾಗರಿಕರು ಬಲಿ

ಛತ್ತೀಸ್ ಗಢ್: ಬಸ್ ಅನ್ನು ಗುರಿಯಾಗಿರಿಸಿಕೊಂಡು ಸುಧಾರಿತ ಸ್ಫೋಟಕ ಬಳಸಿ ನಕ್ಸಲೀಯರು ನಡೆಸಿದ ದಾಳಿಯಲ್ಲಿ ಮೂವರು ನಾಗರಿಕರು, ಒಬ್ಬರು ಸಿಐಎಸ್ ಎಫ್(ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ) ನ ಯೋಧ ಹುತಾತ್ಮರಾಗಿರುವ ಘಟನೆ ದಾಂತೇವಾಡದಲ್ಲಿ ಗುರುವಾರ ನಡೆದಿದೆ.

ಪಿಟಿಐ ವರದಿ ಪ್ರಕಾರ, ದಾಂತೇವಾಡದಲ್ಲಿ ವಾಹನ ಗುರಿಯಾಗಿರಿಸಿಕೊಂಡು ನಕ್ಸಲೀಯರು ನಡೆಸಿದ ಸ್ಫೋಟದಲ್ಲಿ ಒಬ್ಬರು ಯೋಧರು, ಬಸ್ ಚಾಲಕ, ಕಂಡಕ್ಟರ್ ಹಾಗೂ ಕ್ಲೀನರ್ ಸಾವನ್ನಪ್ಪಿರುವುದಾಗಿ ವಿವರಿಸಿದೆ. ಘಟನೆಯಲ್ಲಿ ಇಬ್ಬರು ಸಿಐಎಸ್ ಎಫ್ ಯೋಧರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ದಾಂತೇವಾಡ ಜಿಲ್ಲೆಯ ಗುಡ್ಡಗಾಡು ಪ್ರದೇಶವಾದ ಬಾಚೇಲಿ ಎಂಬಲ್ಲಿ ಸ್ಫೋಟ ಘಟನೆ ನಡೆದಿರುವುದಾಗಿ ವರದಿ ತಿಳಿಸಿದೆ. ಸಿಐಎಸ್ ಎಫ್ ಯೋಧರು ದಿನನಿತ್ಯದ ಅಡುಗೆ ಸಾಮಾನು ಖರೀದಿಸಿಕೊಂಡು ಬಸ್ ನಲ್ಲಿ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.

ನವೆಂಬರ್ 12 ಮತ್ತು 20ರಂದು ಒಟ್ಟು ಎರಡು ಹಂತದಲ್ಲಿ ಛತ್ತೀಸ್ ಗಢ್ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈ ವೇಳೆ ನಕ್ಸಲೀಯರ ಅಟ್ಟಹಾಸ ಮತ್ತೆ ಮುಂದುವರಿದಂತಾಗಿದೆ.

No Comments

Leave A Comment