Log In
BREAKING NEWS >
ವಿಶ್ವಾಸಮತದ ಅಗ್ನಿಪರೀಕ್ಷೆ ಗೆದ್ದ ಗೋವಾ ಸಿಎಂ ಪ್ರಮೋದ್ ಸಾವಂತ್...ಡಯಾನ ಸಮೂಹ ಸ೦ಸ್ಥೆಯ ಪಾಲುದಾರರಾದ ಎ೦.ಯಶವ೦ತ ಪೈ ನಿಧನ...

ದುನಿಯಾ ವಿಜಿಗೆ ಮತ್ತೆ ಸಂಕಷ್ಟ, ತಂದೆ ವಿರುದ್ಧ ದೂರು ದಾಖಲಿಸಿದ ವಿಜಯ್ ಪುತ್ರಿ

ಬೆಂಗಳೂರು: ಸ್ಯಾಂಡಲ್ವುಡ್ ನ ಕರಿಚಿರತೆ ಖ್ಯಾತಿಯ ದುನಿಯಾ ವಿಜಯ್ ಗೆ ಮತ್ತೊಮ್ಮೆ ಸಂಕಷ್ಟ ಎದುರಾಗಿದ್ದು ಸ್ವಂತ ಪುತ್ರಿಯೇ ವಿಜಯ್ ವಿರುದ್ಧ ದೂರು ದಾಖಲಿಸಿದ್ದಾರೆ.
ಪುತ್ರಿ ಮೋನಿಕಾ ತಂದೆ ವಿಜಯ್, ಮಲತಾಯಿ ಕೀರ್ತಿ ಗೌಡ, ವಿನೋದ್, ಹೇಮಂತ್ ಹಾಗೂ ಕಾರು ಚಾಲಕ ಮೊಹಮ್ಮದ್ ವಿರುದ್ಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅಕ್ಟೋಬರ್ 22ರಂದು ನಾನು ನನ್ನ ವೈಯಕ್ತಿಕ ವಸ್ತುಗಳು ಹಾಗೂ ಕಡತಗಳನ್ನು ತೆಗೆದುಕೊಂಡು ಬರಲು ವಿಜಯ್ ನೆಲೆಸಿರುವ ಮನೆಗೆ ಹೋಗಿದ್ದಾಗ ಅಲ್ಲಿ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಮಾರಕಾಸ್ತ್ರಗಳಿಂದ ನನ್ನ ಬೆದರಿಸಿ, ನನ್ನ ತಲೆಯನ್ನು ಹಿಡಿದು ಗೋಡೆಗೆ ಗುದ್ದಿದ್ದರು ಎಂದು ಮೋನಿಕಾ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ದುನಿಯಾ ವಿಜಯ್ ತಮ್ಮ ಆಪ್ತ ಪಾನಿಪೂರಿ ಕಿಟ್ಟಿ ಅಣ್ಣನ ಮಗನ ಮೇಲೆ ಅಪಹರಣ ಹಾಗೂ ಹಲ್ಲೆ ಮಾಡಿದ್ದ ಆರೋಪ  ಸಂಬಂಧ ಕೆಲ ದಿನಗಳ ಕಾಲ ಪರಪ್ಪನ ಅಗ್ರಹಾರದಲ್ಲಿದ್ದು ಜಾಮೀನು ಪಡೆದು ಹೊರಬಂದಿದ್ದ ವಿಜಯ್ ಗೆ ಇದೀಗ ತಮ್ಮ ಸ್ವಂತ ಪುತ್ರಿಯೇ ದೂರು ದಾಖಲಿಸಿದ್ದಾರೆ.
No Comments

Leave A Comment