Log In
BREAKING NEWS >
ವಿಶ್ವಾಸಮತದ ಅಗ್ನಿಪರೀಕ್ಷೆ ಗೆದ್ದ ಗೋವಾ ಸಿಎಂ ಪ್ರಮೋದ್ ಸಾವಂತ್...ಡಯಾನ ಸಮೂಹ ಸ೦ಸ್ಥೆಯ ಪಾಲುದಾರರಾದ ಎ೦.ಯಶವ೦ತ ಪೈ ನಿಧನ...

ದಿ ವಿಲನ್‌ಗೆ ವ್ಯಾಪಕ ಟೀಕೆ; ಠಾಣೆ ಮೆಟ್ಟಿಲೇರಿದ ನಿರ್ದೇಶಕ ಪ್ರೇಮ್‌

ಬೆಂಗಳೂರು: ದಿ ವಿಲನ್‌ ಚಿತ್ರದ ಕುರಿತು ವ್ಯಾಪಕವಾಗಿ ಟೀಕೆಗಳು, ಪುಕಾರುಗಳನ್ನು ಹಬ್ಬಿಸಿ ವಿವಾದ ಹುಟ್ಟು ಹಾಕುತ್ತಿರುವವರ ವಿರುದ್ಧ ನಿರ್ದೇಶಕ ಪ್ರೇಮ್‌ ಅವರು ಠಾಣೆಯ ಮೆಟ್ಟಿಲೇರಿದ್ದಾರೆ.

ಮಂಗಳವಾರ ಉಪ್ಪಾರಪೇಟೆ ಪೊಲೀಸ್‌ ಠಾಣೆಗೆ ಆಗಮಿಸಿದ ನಿರ್ದೇಶಕ ಪ್ರೇಮ್‌ ಪುಕಾರು ಹಬ್ಬಿಸಿ, ಚಿತ್ರದ ವಿರುದ್ಧ ಅಪಪ್ರಚಾರ ಮಾಡುತ್ತಿರುವವರು ಮತ್ತು ವೈಯಕ್ತಿಕವಾಗಿ ಕೀಳು ಮಟ್ಟದ ಟೀಕೆಗಳನ್ನು ಮಾಡುತ್ತಿರುವವ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಡಿಸಿಪಿ ರವಿ ಡಿ. ಚೆನ್ನಣ್ಣನವರ್‌ ಅವರು ಪ್ರೇಮ್‌ ಅವರು ನೀಡಿರುವ ದೂರನ್ನು ಸ್ವೀಕರಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಚಿತ್ರ ಬಿಡುಗಡೆಯಾದ ಬಳಿಕ ದೃಶ್ಯವೊಂದನ್ನು ಆಕ್ಷೇಪಿಸಿ ಶಿವರಾಜ್‌ ಕುಮಾರ್‌ ಅವರ ಅಭಿಮಾನಿಗಳೆಂದು ಹೇಳಿಕೊಂಡಿದ್ದ ಹಲವರು ವ್ಯಾಪಕ ಆಕ್ರೋಶ ಹೊರ ಹಾಕಿದ್ದರು. ನಿರ್ದೇಶಕ ಪ್ರೇಮ್‌ ವಿರುದ್ಧ ಅವಾಚ್ಯ ಶಬ್ಧಗಳಿಂದಲೂ ವೈಯಕ್ತಿಕ ನಿಂದನೆ ಮಾಡಿದ್ದರು.

No Comments

Leave A Comment