Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಉಡುಪಿ ಜಿಲ್ಲಾ ಭಜನಾ ಮಂಡಳಿಗಳ ಒಕ್ಕೂಟದ ಸಹಯೋಗದಲ್ಲಿ “ಭಜನಾ ಕಮ್ಮಟ” ಮತ್ತು “ನಗರ ಭಜನೆ”

ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ಹಾಗೂ ಉಡುಪಿ ಜಿಲ್ಲಾ ಭಜನಾ ಮಂಡಳಿಗಳ ಒಕ್ಕೂಟದ ಸಹಯೋಗದಲ್ಲಿ ನಡೆದ “ಭಜನಾ ಕಮ್ಮಟ” ಮತ್ತು “ನಗರ ಭಜನೆ” ಯನ್ನು ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಉದ್ಘಾಟನೆ ಮಾಡಿ ಪ್ರಪಂಚದ ಯಾವ ಜೀವಿಗಳಿಗೂ ಇಲ್ಲದ ಮಾತನಾಡುವ ನಾಲಿಗೆ ಇರುವ ಮಾನವ ಭಗವಂತನ ಭಜನೆಯನ್ನು ಮಾಡಿದಾಗ ದೇವರ ಕೃಪೆಗೆ ಭಾಜನರಾಗಬಹುದು,ಅದನ್ನು ಇಲ್ಲಿನ ಮಂಡಳಿಯ ಸದಸ್ಯರು ಮಾಡಿ ಜಗತ್ತಿಗೆ ತೋರಿಸಿದ್ದಾರೆ,ದೇಶದ ಎಲ್ಲಾ ಜನರಿಗೆ ಇದರಿಂದ ಪ್ರೇರಣೆಯಾಗಲಿ ಎಂದು. ಆಶೀರ್ವಚಿಸಿದರು

ಸಮಾರಂಭದಲ್ಲಿ ಗೌರವಾಧ್ಯಕ್ಷರಾದ ನಾಡೋಜ ಡಾ.ಜಿ.ಶಂಕರ್,ಜಿಲ್ಲಾಧ್ಯಕ್ಷರಾದ ಭೋಜರಾಜ್ ಆರ್.ಕಿಡಿಯೂರ್,ಅಭ್ಯಾಗತರಾಗಿ ಹರಿದಾಸ ಸಂಗೀತರತ್ನ ಪುತ್ತೂರು ನರಸಿಂಹ ನಾಯಕ್,ಭುವನೇಂದ್ರ ಕಿದಿಯೂರ್,ಆನಂದ ಪಿ.ಸುವರ್ಣ,ಗೋಪಾಲ್ ಸಿ.ಬಂಗೇರ,ಸಾಧು ಸಾಲಿಯಾನ್,ದಿವಾಕರ ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು.

No Comments

Leave A Comment