Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಹಿರಿಯ ತೆಲುಗು ನಟ ವೈಜಗ್ ಪ್ರಸಾದ್ ಇನ್ನಿಲ್ಲ

ಹೈದರಾಬಾದ್: ತೆಲುಗು ಚಲನಚಿತ್ರೋದ್ಯಮದಲ್ಲಿ ಸಕ್ರಿಯರಾಗಿದ್ದ ಹಿರಿಯ ನಟ ವೈಜಗ್ ಪ್ರಸಾದ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಭಾನುವಾರ ಬೆಳಗಿನ ಜಾವ 3 ಗಂಟೆಗೆ ಅವರು ಸಾವನ್ನಪ್ಪಿದ್ದು ಅವರಿಗೆ 75 ವರ್ಷ ವಯಸ್ಸಾಗಿತ್ತು.
ಜನಪ್ರಿಯ ಮಟ ಪ್ರಸಾದ್ ಪತ್ನಿ ವಿದ್ಯಾವತಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ವಿಶಾಖಪಟ್ಟಣ ನಗರದಿಂದ ಬಂದಿದ್ದ ಪ್ರಸಾದ್ ಅವರನ್ನು ವೈಜಗ್ ಪ್ರಸಾದ್ ಎಂದೇ ಗುರುತಿಸಲಾಗುತ್ತದೆ. ಮುಂದೆ ಅದುವೇ ಅವರ ಚಿತ್ರರಂಗದಲ್ಲಿನ ಹೆಸರೂ ಆಗಿ ಉಳಿದಿದೆ.
ಪ್ರಸಾದ್ ಅವರು “ನುವ್ವು ನೇನು”, “ಜೈ ಚಿರಂಜೀವಿ”, “ಭದ್ರಾ” ಸೇರಿದಂತೆ ಅನೇಕ ಚಿತ್ರಗಳಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
2017ರಲ್ಲಿ ತೆರೆಗೆ ಬಂದ “ಇದಿಮಾ ಪ್ರೇಮಕಥಾ” ಇವರ ಕಡೆಯ ಚಿತ್ರವಾಗಿತ್ತು.
ತೆಲುಗು ಸಿನಿಮಾ ಹೊರತುಪಡಿಸಿ, ಅವರು ಕೆಲವು ತಮಿಳು ಚಲನಚಿತ್ರಗಳಲ್ಲಿ ಸಹ ಅಭಿನಯಿಸಿದ್ದರು. ಮೂರು ದಶಕಗಳಿಗಿಂತ ಹೆಚ್ಚು ಕಾಲ ಚಲನಚಿತ್ರ ವೃತ್ತಿಜೀವನದಲ್ಲಿ ಅವರು ಸುಮಾರು 175 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಇನ್ನು ಪ್ರಸಾದ್ ಅವರ ನಿಜವಾದ ಹೆಸರೆಂದರೆ ಕೋರ್ಲಂ ಪಾರ್ವತಿ ವರಪ್ರಸಾದ ರಾವ್ ಎಂದಾಗಿದ್ದು ಇವರು ರಜನಿಕಾಂತ್ ಅವರ ಜನಪ್ರಿಯ ಚಿತ್ರ “ಶಿವಾಜಿ”ಯಲ್ಲಿ ಸಹ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.
ಚಿತ್ರರಂಗಕ್ಕೆ ಬರುವ ಮುನ್ನ ಇವರು ರಂಗಭೂಮಿಯಲ್ಲಿ ಸಕ್ರಿಯವಾಗಿದ್ದರು. 1985ರಲ್ಲಿ ತೆರೆಕಂಡ “ಬಾಬಾಯಿ ಅಬ್ಬಾಯಿ” ಪ್ರಸಾದ್ ಅವರಿಗೆ ಮೊದಲ ಬಾರಿಗೆ ಯಶಸ್ಸು, ಹೆಸರನ್ನು ತಂದುಕೊಟ್ಟಿತ್ತು.
No Comments

Leave A Comment