Log In
BREAKING NEWS >
ವಿಶ್ವಾಸಮತದ ಅಗ್ನಿಪರೀಕ್ಷೆ ಗೆದ್ದ ಗೋವಾ ಸಿಎಂ ಪ್ರಮೋದ್ ಸಾವಂತ್...ಡಯಾನ ಸಮೂಹ ಸ೦ಸ್ಥೆಯ ಪಾಲುದಾರರಾದ ಎ೦.ಯಶವ೦ತ ಪೈ ನಿಧನ...

ಹುಣಸೂರಿನಲ್ಲಿ ಕಾರು ಅಪಘಾತ: ಹಿಂದಿ ಚಿತ್ರದ ಸ್ಟಂಟ್‌ ಮಾಸ್ಟರ್‌ ಸಾವು

ಮೈಸೂರು : ಹುಣಸೂರು ತಾಲೂಕಿನ ಯಶೋಧಪುರ ಗ್ರಾಮದ ಬಳಿ ರಸ್ತೆ ವಿಭಾಜಕಕ್ಕೆ ಕಾರು ಢಿಕ್ಕಿಯಾಗಿ ಸಂಭವಿಸಿದ ಭೀಕರ ಅವಘಡದಲ್ಲಿ ಹಿಂದಿ ಚಿತ್ರದ ಸ್ಟಂಟ್‌ ಮಾಸ್ಟರ್‌ ಮುನ್ನಾಭಾಯಿ (42) ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ವರದಿಯಾಗಿದೆ.

ಇವರ ಜತೆಗಿದ್ದ ಇಬ್ಬರು ಸ್ನೇಹಿತರಾದ ಅರುಣ್‌ ಕುಮಾರ್‌ ಮತ್ತು ಕಾರು ಚಾಲಕ ಉಮೇಶ್‌ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.

ಮುನ್ನಾಭಾಯಿ ಮತ್ತು ಜತೆಗಾರರು ಕಾರಿನಲ್ಲಿ ಚಿತ್ರೀಕರಣ ನಿಮಿತ್ತ ಬೆಂಗಳೂರಿನಿಂದ ಮಡಿಕೇರಿಗೆ ಪ್ರಯಾಣಿಸುತ್ತಿದ್ದರು.

ಮೃತ ಮುನ್ನಾಭಾಯಿ ಅವರು ಮಹಮ್ಮದ ಅಸ್ಲಾಂ ಅವರ ಪುತ್ರರಾಗಿದ್ದು ಮುಂಬಯಿ ವಾಸಿಯಾಗಿದ್ದಾರೆ ಮತ್ತು ಹಲವಾರು ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ. ಈಚೆಗೆ ಕನ್ನಡ ಚಿತ್ರವೊಂದರಲ್ಲಿ ನಟಿಸಲು ಒಪ್ಪಿಕೊಂಡು ಇಲ್ಲಿಗೆ ಬಂದಿದ್ದರು.

No Comments

Leave A Comment