Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವರಾತ್ರೆಯ "ಚ೦ಡಿಕಾ ಹೋಮ " ಕಾರ್ಯಕ್ರಮವು 19-10-2018ರ೦ದು ಜರಗಲಿದೆ....

ರಷ್ಯಾದಿಂದ ಎಸ್ -400 ಖರೀದಿ,ಇರಾನ್ ನಿಂದ ತೈಲ ಆಮದು : ಭಾರತದ ನಿರ್ಧಾರವನ್ನು ಪರಿಶೀಲಿಸುತ್ತಿರುವ ಅಮೆರಿಕಾ !

ವಾಷಿಂಗ್ಟನ್ : ರಷ್ಯಾದಿಂದ ಎಸ್ -400 ವಾಯು ರಕ್ಷಣಾ ವ್ಯವಸ್ಥೆ ಹಾಗೂ ಇರಾನ್ ನಿಂದ ತೈಲ ಆಮದು ಮಾಡಿಕೊಳ್ಳುವ ಭಾರತದ ನಿರ್ಧಾರವನ್ನು  ಗಂಭೀರವಾಗಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅಮೆರಿಕಾದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಒಂದು ವೇಳೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್  ಭಾರತದ ಮೇಲೆ  ದಂಡನಾತ್ಮಕ ಕ್ರಮಗಳನ್ನು ಎದುರಿಸುವಂತೆ ಮಾಡಿದ್ದರೆ ಆನಂತರ ಇದು  ಸಹಾಯಕವಾಗುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.ಇರಾನ್ ದೇಶದ ಶಂಕಿತ ಪರಮಾಣು ಕಾರ್ಯಕ್ರಮಗಳು ಮತ್ತು  ದುರುದ್ದೇಶಪೂರಿತ  ಚಟುವಟಿಕೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ನವೆಂಬರ್ 4 ರಿಂದ ಆ ದೇಶದಿಂದ ತೈಲವನ್ನು ಆಮದು ಮಾಡಿಕೊಳ್ಳದಂತೆ  ಅಮೆರಿಕಾ ಜಾಗತಿಕ ನಿರ್ಬಂಧ ವಿಧಿಸಿದೆ.

ಇದರಿಂದಾಗಿ ಭಾರತ  ನವೆಂಬರ್ 4 ರಿಂದ ಇರಾನ್ ನಿಂದ ತೈಲ ಆಮದು ಮಾಡಿಕೊಳ್ಳುವ ನಿರ್ಧಾರ ಕುರಿತು ಪ್ರತಿಕ್ರಿಯಿಸಿದ ಅಮೆರಿಕಾ  ರಾಜ್ ವಕ್ತಾರ ಹೀಟರ್ ನೌರ್ಟ್  ಇದರಿಂದ ಸಹಾಯಕವಾಗುವುದಿಲ್ಲ ಎಂದು ಹೇಳಿದ್ದಾರೆ.

ನವೆಂಬರ್  ತಿಂಗಳಿನಿಂದ ಇರಾನ್ ನಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳಲು ಎರಡು ರಿಪೈನರ್ಸ್ ಗಳು  ಆರ್ಡರ್ ಮಾಡಿವೆ ಎಂದು ಸೋಮವಾರ ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದರು.ನವೆಂಬರ್ 4 ರಿಂದ ಇರಾನ್ ನಿಂದ ತೈಲ ಆಮದು ನಿರ್ಬಂಧದ ಬಗ್ಗೆ ಪೆಟ್ರೋಲಿಯಂ ಒಕ್ಕೂಟ ರಾಷ್ಟ್ರಗಳು ಹಾಗೂ  ಪಾಲುದಾರಿಕೆಯ ರಾಷ್ಟ್ರಗಳೊಂದಿಗೆ ಮಾತುಕತೆ ನಡೆಸಿರುವುದಾಗಿ ನೌರ್ಟ್ ಹೇಳಿದ್ದಾರೆ.

No Comments

Leave A Comment