Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಉಡುಪಿ: ಕುಂಜಿಬೆಟ್ಟಿನಲ್ಲಿ ರಸ್ತೆ ವಿಸ್ತರಣೆ ಕಾರ್ಯ

ಉಡುಪಿ: ಪರ್ಕಳದ ದೇವಿನಗರದಿಂದ ಕರಾವಳಿ ಜಂಕ್ಷನ್‌ವರೆಗಿನ 10 ಕಿ.ಮೀ. ದೀರ್ಘ‌ದ ರಾ.ಹೆ 169ಎ ರಸ್ತೆ ವಿಸ್ತರಣೆ ಯೋಜನೆಯಲ್ಲಿ ಬುಧವಾರ ಎಂಜಿಎಂ ಕಾಲೇಜಿನ ಬಳಿ ಕುಂಜಿಬೆಟ್ಟಿನಲ್ಲಿ ಕಾಮಗಾರಿ ಆರಂಭಿಸಲಾಗಿದೆ.

ಈಗಿನ ಡಾಮರು ರಸ್ತೆಯನ್ನು ತೆಗೆದು ಒಟ್ಟು 30 ಮೀ. ಅಗಲಗೊಳಿಸುವ ಕೆಲಸ ನಡೆಯುತ್ತಿದೆ. ಪ್ರತಿ 500 ಮೀ. ಉದ್ದದ ರಸ್ತೆಯನ್ನು ಮಾಡುತ್ತ ಕಾಮಗಾರಿಯನ್ನು ಮುಂದು ವರಿಸಲಾಗುವುದು.  ಕಲ್ಸಂಕದಿಂದ ಮಣಿಪಾಲಕ್ಕೆ ಹೋಗಿ ಬರುವವರಿಗೆ ಅವಕಾಶ ನೀಡಲಾಗಿದೆಯಾದರೂ ವಾಹನ ನಿಬಿಡತೆ ಉಂಟಾಗದೆ ಇರಲು ಕಲ್ಸಂಕದಿಂದ ದೊಡ್ಡಣಗುಡ್ಡೆ ಮೂಲಕ ಮಣಿಪಾಲಕ್ಕೆ ತೆರಳಬಹುದು ಎಂದು ವಿನಂತಿಸಲಾಗಿದೆ.

ತೀರ್ಥಹಳ್ಳಿಯಿಂದ ಮಲ್ಪೆ ವರೆಗಿನ 90 ಕಿ.ಮೀ. ರಸ್ತೆಯನ್ನು 30 ಮೀಟರ್‌ ಅಗಲಗೊಳಿಸುವ  ಕಾಂಕ್ರಿಟ್‌ ರಸ್ತೆ ಕಾಮಗಾರಿ ಇದಾಗಿದೆ. 98.46 ಕೋ. ರೂ. ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. 30 ಮೀ. ಅಗಲದ ರಸ್ತೆಯ ಎರಡು ಕಡೆಯ 1 ಮೀ. ರಸ್ತೆಯನ್ನು ಇತರ ಉದ್ದೇಶಕ್ಕಾಗಿ ಮೀಸಲಿಡಲಾಗಿದೆ. ಇದರಲ್ಲಿ ಪೈಪ್‌ಲೈನ್‌, ಆಪ್ಟಿಕಲ್‌ ಕೇಬಲ್‌, ಟೆಲಿಫೋನ್‌ ತಂತಿ ಅಳವಡಿಕೆಯಾಗಲಿದೆ. ಉಳಿದ 28 ಮೀ.ನಲ್ಲಿ 1.5 ಮೀ. ಅಗಲದ ರಸ್ತೆ ವಿಭಾಜಕ, ಎರಡು ಕಡೆಗಳಲ್ಲಿ 2 ಮೀ.  ಅಗಲದ ಪಾದಚಾರಿ ಮಾರ್ಗ,  1.5 ಮೀ. ಅಗಲದ ಚರಂಡಿ, 9.5 ಮೀ. ಅಗಲದ ರಸ್ತೆ ನಿರ್ಮಾಣವಾಗಲಿದೆ.

No Comments

Leave A Comment