Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವರಾತ್ರೆಯ "ಚ೦ಡಿಕಾ ಹೋಮ " ಕಾರ್ಯಕ್ರಮವು 19-10-2018ರ೦ದು ಜರಗಲಿದೆ....

ತಿರುಚ್ಚಿ ಏರ್‌ ಪೋರ್ಟ್‌ ಗೋಡೆ ಸವರಿದ AI Express; ಎಲ್ಲರೂ ಪಾರು

ತಿರುಚಿನಾಪಳ್ಳಿ : ದುಬೈಗೆ ಹೋಗಲಿದ್ದ ಮತ್ತು 133 ಪ್ರಯಾಣಿಕರಿದ್ದ ಏರಿಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ಇಂದು ಶುಕ್ರವಾರ ಇಲ್ಲಿನ ವಿಮಾನ ನಿಲ್ದಾಣದ ಗೋಡೆಯನ್ನು ಸವರಿ ಕ್ರಮಿಸಿದ ಆತಂಕಕಾರಿ ಘಟನೆ ನಡೆದಿದೆ.

ವಿಮಾನದಲ್ಲಿದ್ದ ಎಲ್ಲ 133 ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಾಯ ಸಾರಿಗೆ ನಿಯಂತ್ರಣ ಕೊಠಡಿಯ ಅಧಿಕಾರಿಗಳೊಂದಿಗಿನ ಸಂಪರ್ಕ ಕಳೆದುಕೊಂಡಿದ್ದ ವಿಮಾನವು ಅನಂತರ ಸುಮಾರು ನಾಲ್ಕು ತಾಸುಗಳ ಬಳಿಕ ಮುಂಬಯಿ ವಿಮಾನ ನಿಲ್ದಾಣದಲ್ಲಿ ಇಳಿಯಿತು.

ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತೇ ಅಥವಾ ಪೈಲಟ್‌ ಎಸಗಿದ ತಪ್ಪಿನಿಂದಾಗಿ ಈ ಘಟನೆ ನಡೆಯಿತೇ ಎಂಬುದು ಗೊತ್ತಾಗಿಲ್ಲ  ಎಂದು ಅಧಿಕಾರಿಗಳು ತಿಳಿಸಿದ್ದಾರೆ.

No Comments

Leave A Comment