ಪಂಜಾಬ್: ಬಾಯ್’ಫ್ರೆಂಡ್ ವಿಚಾರ ಪೋಷಕರಿಗೆ ಹೇಳಿದ್ದಕ್ಕೆ 4 ವರ್ಷದ ಸಹೋದರನನ್ನು ಕೊಂದ ಸಹೋದರಿ!ಲುಧಿಯಾನ: ಬಾಯ್’ಫ್ರೆಂಡ್ ಇದ್ದ ವಿಚಾರವನ್ನು ಪೋಷಕರಿಗೆ ತಿಳಿಸಿದ್ದಕ್ಕೆ ಸಿಡಿಮಿಡಿಕೊಂಡ ಸಹೋದರಿಯೊಬ್ಬಳು ನಾಲ್ಕು ವರ್ಷದ ತನ್ನ ಸಹೋದರನನ್ನು ಹತ್ಯೆ ಮಾಡಿರುವ ಘಟನೆ ಪಂಜಾಬ್ ನ ಲುಧಿಯಾನದಲ್ಲಿ ನಡೆದಿದೆ.ಅನ್ಶ್ (4) ಹತ್ಯೆಯಾದ ಬಾಲಕನಾಗಿದ್ದು, ರೇಣು ಕನೌಜಿಯಾ (19) ಬಾಲಕನನ್ನು ಹತ್ಯೆ ಮಾಡಿದ ಸಹೋದರಿ ಎಂದು ಗುರ್ತಿಸಲಾಗಿದೆ.ಪ್ರೀತಿಗೆ ಸಹೋದರ ಅನ್ಶ್ ಅಡ್ಡಿಯಾಗಿದ್ದ. ಮನೆಯಿಂದ ಹೊರಗೆ ಹೋದಾಗಲೆಲ್ಲಾ ನನ್ನನ್ನು ಹಿಂಬಾಲಿಸುತ್ತಿದ್ದ. ಇದರಂತೆ ಒಂದು ದಿನ ನನ್ನ ಬಾಯ್’ಫ್ರೆಂಡ್ ಜೊತೆಗಿದುದ್ದನ್ನು ಆತ ನೋಡಿದ್ದ. ಬಳಿಕ ಪೋಷಕರಿಗೆ ಹೇಳಿದ್ದ. ಇದಾದ ಬಳಿಕ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಅ.6 ರಂದು ಕತ್ತು ಸೀಳಿ ಹತ್ಯೆ ಮಾಡಿದ್ದೆ ಎಂದು ವಿಚಾರಣೆ ವೇಳೆ ರೇಣು ಬಾಯ್ಬಿಟ್ಟಿದ್ದಾಳೆ.