Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಯುವ ಒಲಿಂಪಿಕ್ಸ್ : ಭಾರತಕ್ಕೆ ಐತಿಹಾಸಿಕ ಚಿನ್ನ ಗೆದ್ದುಕೊಟ್ಟ ಜೆರೆಮಿ

ಬ್ಯೂನಸ್‌ ಐರಿಸ್‌, ಆರ್ಜೆಂಟೀನಾ : ಇಲ್ಲೀಗ ಸಾಗುತ್ತಿರುವ ಮೂರನೇ ಯುವ ಒಲಿಂಪಿಕ್ಸ್‌ನಲ್ಲಿ ವೇಟ್‌ ಲಿಫ್ಟರ್‌ ಜೆರೆಮಿ ಲ್ಯಾರಿನ್ನುಂಗ ಅವರು ಇಂದು ಮಂಗಳವಾರ ಭಾರತಕ್ಕೆ ಮೊತ್ತ ಮೊದಲ ಐತಿಹಾಸಿಕ  ಚಿನ್ನದ ಪದಕವನ್ನು ಗೆದ್ದುಕೊಟ್ಟರು.

ಲ್ಯಾರಿನ್ನುಂಗ  ಅವರು ತನ್ನ ಅಂತಿಮ ಯತ್ನದಲ್ಲಿ 150 ಕಿಲೋ ಭಾರ ಎತ್ತುವುದರೊಂದಿಗೆ ‘ಎ’ ಬಣದಲ್ಲಿ ಪುರುಷರ 62 ಕೆಜಿ ವಿಭಾಗದಲ್ಲಿ 274 ಕೆಜಿ ಸಂಯುಕ್ತ ಭಾರ ಎತ್ತುವ ಸಾಧನೆಯನ್ನು ಮಾಡುವ ಮೂಲಕ ಐತಿಹಾಸಿಕ ಚಿನ್ನದ ಪದಕವನ್ನು ಗೆದ್ದುಕೊಂಡರು.

15ರ ಹರೆಯದ ಲ್ಯಾರಿನ್ನುಂಗ ಅವರು ಸ್ನ್ಯಾಚ್‌ನಲ್ಲಿ 120 ಕಿಲೋ ಮತ್ತು 124 ಕಿಲೋ, ಕ್ಲೀನ್‌ ಆ್ಯಂಡ್‌ ಜರ್ಕ್‌ನಲ್ಲಿ 142 ಕಿಲೋ ಮತ್ತು 150 ಕಿಲೋ ಎತ್ತುವ ಮೂಲಕ ಟರ್ಕಿಯ ತೋಪ್‌ಟಾಸ್‌ ಕಾನೇರ್‌ ಷವರನ್ನು (263 ಕಿಲೋ) ಮತ್ತು ಕೊಲಂಬಿಯಾ ದ ಜೋಸ್‌ ಮಂಜಾರಿಸ್‌ (260 ಕಿಲೋ) ಅವರನ್ನು ಹಿಂದಿಕ್ಕಿದರು.

ಈ ಮೊದಲ ಭಾರತೀಯ ತಂಡ ತುಷಾರ್‌ಮಾನೇ (10 ಮೀ. ಏರ್‌ ರೈಫ‌ಲ್‌) ಮೆಹೂಲಿ ಘೋಷ್‌ (10 ಮೀ. ಏರ್‌ ರೈಫ‌ಲ್‌) ಮತ್ತು ತಬಾಬಿ ದೇವಿ (44 ಕಿಲೋ ಜೂಡೋ) ಅವರು ಒಟ್ಟು ಮೂರು ಬೆಳ್ಳಿ ಪದಕ ಗೆಲ್ಲುವ ಉತ್ತಮ ಸಾಧನೆಯನ್ನು ದಾಖಲಿಸಿದ್ದರು. 2014ರ ಚೀನ ಯುವ ಒಲಿಂಪಿಕ್ಸ್‌ ನಲ್ಲಿ ಭಾರತ ಎರಡು ಪದಕಗಳನ್ನು ಗೆದ್ದಿತ್ತು. ಈ ಬಾರಿ ಭಾರತದ ಸಾಧನೆ 1 ಚಿನ್ನ ಮೂರು ಬೆಳ್ಳಿ ಆಗಿದೆ.

No Comments

Leave A Comment