ಉಡುಪಿ ತಾಲೂಕು ಬ್ರಾಹ್ಮಣ ಮಹಾ ಸಭಾ (ರಿ) ವಾರ್ಷಿಕ ಮಹಾ ಸಭೆ ಉಡುಪಿ ತಾಲೂಕು ಬ್ರಾಹ್ಮಣ ಮಹಾ ಸಭಾ (ರಿ) ಇದರ ವಾರ್ಷಿಕ ಮಹಾ ಸಭೆ ಯು ಪೇಜಾವರ ಮಠದ ಶ್ರೀ ರಾಮ ವಿಠಲ ಸಭಾಭವನದಲ್ಲಿ ನಡೆಯಿತು.ಈ ಸಭೆಯ ಅಧ್ಯಕ್ಷತೆಯನ್ನು ತಾಲೂಕು ಸಭಾದ ಅಧ್ಯಕ್ಷರಾದ ಎಮ್.ಮಂಜುನಾಥ ಉಪಾಧ್ಯ ವಹಿಸಿ ಎಲ್ಲ ಕ್ಷೇತ್ರದಲ್ಲಿಯೂ ವಿಪ್ರರು ತಮ್ಮನ್ನು ತಾವು ತೊಡಗಿಸಿ ಕೊಂಡಿದ್ದು ಉತ್ತಮ ಸಾಧನೆ ಮಾಡಿದವರಿದ್ದಾರೆ.ಆದರೆ ನಮ್ಮ ಸಮಾಜದಲ್ಲಿ ಉತ್ತಮ ಪ್ರತಿಭೆಯಿದ್ದು ಆರ್ಥಿಕವಾಗಿ ಹಿಂದುಳಿದವರು ಇದ್ದಾರೆ ಇಂತವರನ್ನು ಗುರುತಿಸಿ ಸಂಘಟನೆ ಮುಕಾಂತರ ಅವರನ್ನು ಮೇಲೆತ್ತುವ ಕಾರ್ಯವು ಆಗಬೇಕು.ಇದಕ್ಕಾಗಿ ಸರ್ವರ ಸಹಕಾರ ಅಗತ್ಯ ಎಂದರು.ಮುಖ್ಯ ಅಥಿತಿಗಳಾದ ಶಾಸಕ ರಘುಪತಿ ಭಟ್ ಇವರು ನಮ್ಮ ಸಮಾಜದವರು ಆಯೋಜಿಸುವ ಎಲ್ಲಾ ಕಾರ್ಯಕ್ರಮಗಳಿಗೂ ತನ್ನ ಪೂರ್ಣ ಸಹಕಾರವಿದ್ದು ಧಾರ್ಮಿಕ,ಶೈಕ್ಷಣಿಕ,ಸಾಂಸ್ಕೃತಿಕ ಕ್ಷೇತ್ರದಲ್ಲಿ ತೊಡಗಿಸಿ ಗುರುತಿಸಿ ಕೊಂಡಂತೆ ರಾಜಕೀಯ ಕ್ಷೇತ್ರದಲ್ಲಿಯೂ ತೊಡಗಿಸಿ ಕೊಳ್ಳಬೇಕು ಎಂದು ನುಡಿದರು.ವಿಪ್ರ ಸಾಧಕರಾದ ನೇತ್ರ ತಜ್ಞೆ ಡಾ.ರೂಪಶ್ರೀ, ರಾಜ್ಯಪ್ರಶಸ್ತಿ ವಿಜೇತ ಶಿಕ್ಷಕರಾದ ವೈ.ಎನ್.ಪ್ರಕಾಶ ರಾವ್ ಹಾಗೂ ಉಡುಪಿ ನಗರ ಸಭೆಯ ನೂತನ ಸದಸ್ಯರಾದ ಕೃಷ್ಣರಾವ್ ಕೊಡಂಚ,ಶ್ರೀಶ ಭಟ್ ಕೊಡವೂರು,ಅಮೃತ ಕೃಷ್ಣಮೂರ್ತಿ ಇವರನ್ನು ಸನ್ಮಾನಿಸಲಾಯಿತು. ಕಳೆದ ಬಾರಿಯ ಕಾರ್ಯಕಾರಿ ಸಮಿತಿಯನ್ನೆ ಸರ್ವಾನುಮತದಿಂದ ಪುನರಾಯ್ಕೆ ಮಾಡಲಾಯಿತು. ಮಂಜುನಾಥ ಉಪಾಧ್ಯ ಸ್ವಾಗತಿಸಿದರು.ಕುದಿ ಶ್ರೀನಿವಾಸ ಭಟ್ ಧನ್ಯವಾದ ನೀಡಿ,ಯಂ.ಶ್ರೀನಿವಾಸ ಬಲ್ಲಾಳ್ ಕಾರ್ಯಕ್ರಮ ನಿರೂಪಿಸಿದರು.