Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ದುರ್ಗದಲ್ಲಿ ಜ್ವಾಲಾಮುಖೀ? ಬೆಂಕಿ ಜ್ವಾಲೆ ಉಗುಳಿತು ಚಿತ್ರದುರ್ಗದ ಒಣ ಭೂಮಿ

ಚಳ್ಳಕೆರೆ (ಚಿತ್ರದುರ್ಗ): ಸತತ ಬರಕ್ಕೆ ತುತ್ತಾಗುತ್ತಿರುವ ತಾಲೂಕಿನ ಜಮೀನೊಂದರ ಭೂಮಿಯ ಕೆಳಭಾಗದಿಂದ ಅಗ್ನಿ ಜ್ವಾಲೆ ಕಾಣಿಸಿಕೊಂಡು “ಜ್ವಾಲಾಮುಖೀ’ಯ ಆತಂಕ ಸೃಷ್ಟಿಸಿದೆ.

ಇಲ್ಲಿನ ನಾಯಕನಹಟ್ಟಿ ಹೋಬಳಿಯ ಮನಮೈನಹಟ್ಟಿ ಗ್ರಾಮದ ತಿಪ್ಪೇಸ್ವಾಮಿ ಎಂಬವ‌ರಿಗೆ ಸೇರಿದ ಜಮೀನಿನಲ್ಲಿ ಕಳೆದ ಮಂಗಳವಾರ (ಅ. 2) ಸಂಜೆ 4 ಗಂಟೆ ಸುಮಾರಿಗೆ ಭೂಮಿಯ ಒಳಭಾಗದಿಂದ ಬೆಂಕಿ ಹೊರ ಹೊಮ್ಮಿದೆ. ಕೆಲ ನಿಮಿಷಗಳ ನಂತರ ಈ ಜ್ವಾಲೆ, ಆರಿದ ಬಳಿಕ ಜ್ವಾಲಾಮುಖೀಯಿಂದ ಉಂಟಾಗುವ ಲಾವಾರಸ ಮಾದರಿ ಕಂಡು ಬಂದಿತ್ತು. ಹೀಗಾಗಿ ಸಣ್ಣ ಪ್ರಮಾಣ ಜ್ವಾಲಾಮುಖೀ ಶಂಕೆ ವ್ಯಕ್ತವಾಗಿದೆ. ಬೆಂಕಿ ಜ್ವಾಲೆ ಕಂಡು ಬಂದ ಸ್ಥಳದ ಪಕ್ಕದಲ್ಲೇ ವಿದ್ಯುತ್‌ ಕಂಬ ಇದ್ದು, ಬೆಂಕಿಯ ಕಾವಿಗೆ ಕಂಬವೂ ಕರಗಿದಂತಾಗಿ ಬಾಗಿಕೊಂಡಿದೆ. ಬೆಸ್ಕಾಂ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಆಗಮಿಸಿ ಕಂಬ ಬದಲಿಸಿದ್ದಾರೆ.

ಜಮೀನಿನ ಮಾಲೀಕ ತಿಪ್ಪೇಸ್ವಾಮಿ ಪೊಲೀಸರಿಗೆ ವಿಷಯ ತಿಳಿಸಿದ್ದು, ಅವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಜ್ವಾಲೆಯಿಂದ ಕರಗಿದ ವಿದ್ಯುತ್‌ ಕಂಬದ ತುಂಡನ್ನು ಭೂಗರ್ಭ ಇಲಾಖೆ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ವರದಿ ಇನ್ನಷ್ಟೇ ಬರಬೇಕಿದೆ.

No Comments

Leave A Comment