Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವರಾತ್ರೆಯ "ಚ೦ಡಿಕಾ ಹೋಮ " ಕಾರ್ಯಕ್ರಮವು 19-10-2018ರ೦ದು ಜರಗಲಿದೆ....

ಪಂಚಾಯಿತಿ ಶಿಕ್ಷೆ : ಬೇರೆ ಜಾತಿ ಹುಡುಗನ ಜೊತೆ ಓಡಿ ಹೋಗಿದ್ದ ಯುವತಿಗೆ ಮರಕ್ಕೆ ಕಟ್ಟಿ ಥಳಿತ !

ನಾವಡ :ಬಿಹಾರ ರಾಜ್ಯದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ.  ಪಂಚಾಯಿತಿ ಆದೇಶದಂತೆ ಬೇರೆ ಜಾತಿಯ ಹುಡುಗನ ಜೊತೆಗೆ ಓಡಿ ಹೋಗಿದ್ದ ಯುವತಿಯನ್ನು ಮರಕ್ಕೆ ಕಟ್ಟಿ ಗ್ರಾಮಸ್ಥರು ಹಿಗ್ಗಾಮುಗ್ಗಾ ಥಳಿಸಿದ್ದಾರೆ.ವಿಪರ್ಯಾಸ ವೆಂದರೆ ಪಂಚಾಯಿತಿ ನೀಡಿರುವ ಶಿಕ್ಷೆಗೆ ಯುವತಿಯ ಪೋಷಕರು ಬೆಂಬಲ ವ್ಯಕ್ತಪಡಿಸಿದ್ದಾರೆ. ರಾಜೌಲಿ ಗ್ರಾಮದಲ್ಲಿ ನಡೆದಿರುವ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸೆಪ್ಟೆಂಬರ್ 30 ರಂದು ಈ ಯುವತಿ ಬೇರೆ ಜಾತಿಯ ಹುಡುಗನೊಂದಿಗೆ ಓಡಿಹೋಗಿದ್ದು, ತನ್ನೂರಿನ ಪಕ್ಕದಲ್ಲಿಯೇ ವಾಸಿಸುತ್ತಿದ್ದರು. ಇವರನ್ನು ಇತ್ತೀಚಿಗೆ ಪತ್ತೆ ಹಚ್ಚಿದ ಗ್ರಾಮಸ್ಥರು ಹಾಗೂ ಪೋಷಕರು ರಾಜೌಲಿಗೆ ಕರೆದುಕೊಂಡು ಬಂದಿದೆ.ನಂತರ ಊರಿನ ಗ್ರಾಮಸ್ಥರೆಲ್ಲಾ ಪಂಚಾಯಿತಿ ನಡೆಸಿ ಆ ಯುವತಿಗೆ ಕಠಿಣ ಶಿಕ್ಷೆಯನ್ನು ಜಾರಿಗೊಳಿಸಿದ್ದಾರೆ.

ಆ ಪ್ರಕಾರ ಯುವತಿಯನ್ನು ಮರಕ್ಕೆ ಕಟ್ಟಿ ಹಲ್ಲೆ ಮಾಡುತ್ತಿದ್ದರೆ , ಮತ್ತೆ ಕೆಲವರು ಮೂಕಪ್ರೇಕ್ಷಕರಾಗಿ ನಿಂತಿರುವ ದೃಶ್ಯ ವಿಡಿಯೋದಲ್ಲಿ ಕಂಡುಬಂದಿದೆ.  ಸ್ಥಳೀಯ ಮಾಧ್ಯಮವೊಂದು ಹಲ್ಲೆ ಸನ್ನಿವೇಶವನ್ನು ವರದಿ ಮಾಡಿದೆ. ಆದರೆ, ಗ್ರಾಮಸ್ಥರಿಂದ ಆ ಯುವತಿಯಿಂದ ಬಿಡುಗಡೆಗೊಳಿಸಲು ಸಾಧ್ಯವಾಗಿಲ್ಲ.

ನಂತರ ಮಾಧ್ಯಮಗಳ  ಜೊತೆಗೆ ಆ ಯುವತಿ ಮಾತನಾಡಿದ್ದು, ತನ್ನಿಷ್ಟದಂತೆ  ಬೇರೆ ಜಾತಿಯ ಯುವಕನೊಂದಿಗೆ ಓಡಿ ಹೋಗಿದ್ದೆ ಎಂದು ತಿಳಿಸಿದ್ದಾರೆ.

ಮತ್ತೊಂದೆಡೆ ಯುವತಿ ತಂದೆ , ಪಂಚಾಯಿತಿ ಶಿಕ್ಷೆ  ನ್ಯಾಯಯುತವಾಗಿಯೇ ಇದೆ.  ನಮ್ಮ ಜಾತಿಯ ಹುಡುಗನ ಜೊತೆ ಬಿಟ್ಟು ಬೇರೆ ಜಾತಿಯ ಹುಡುಗನೊಂದಿಗೆ ವಿವಾಹವಾಗಲು ನಾವು ಬಿಡುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

No Comments

Leave A Comment