Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಬಾರ್ಕ್‌ ವಿಜ್ಞಾನಿಯ ಪುತ್ರನ ಶವ ಪತ್ತೆ

ಮುಂಬಯಿ: ಬಾರ್ಕ್‌ (ಭಾಭಾ ಪರಮಾಣು ಸಂಶೋಧನಾ ಕೇಂದ್ರ) ವಿಜ್ಞಾನಿ ಭಾಸ್ಕರ್‌ ದತ್‌ ಹಾಗೂ ಮನಶಾಸ್ತ್ರಜ್ಞೆ ಚಂದ್ರಾ ರಾಮಮೂರ್ತಿ ಅವರ ಪುತ್ರ, ಸೆ.23ರಿಂದ ನಾಪತ್ತೆಯಾಗಿದ್ದ 17 ವರ್ಷದ ನಮನ್‌ ದತ್‌ ಮೃತದೇಹ ಗುರುವಾರ ಪತ್ತೆಯಾಗಿದೆ.

ಮೋರಾ ಸಗರಾಯಿ ಬೀಚ್‌ನ ಎಲಿಫೆಂಟಾ ಗುಹೆಯ ಸಮೀಪ ನಮನ್‌ ಮೃತದೇಹ ಸಿಕ್ಕಿದ್ದು, ಆತ ನೀರಲ್ಲಿ ಮುಳುಗಿ ಸಾವಿಗೀಡಾಗಿರಬಹುದು ಹಾಗೂ ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎಂದು ಕಾಣುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. 12ನೇ ತರಗತಿ ವಿದ್ಯಾರ್ಥಿಯಾಗಿದ್ದ ನಮನ್‌ ನವಿ ಮುಂಬಯಿನಲ್ಲಿ ತನ್ನ ಹೆತ್ತವರೊಂದಿಗೆ ವಾಸಿಸುತ್ತಿದ್ದ.

ಸೆ.23ರಂದು ರಾತ್ರಿ ಯಾರಿಗೂ ಹೇಳದೆ ಮನೆಯಿಂದ ಹೊರಟಿದ್ದ ನಮನ್‌ ಬಗ್ಗೆ ಸುಳಿವು ಸಿಕ್ಕಿರಲಿಲ್ಲ. ಐಐಟಿ ಪರೀಕ್ಷೆಗೆ ತಯಾರಾ ಗುತ್ತಿದ್ದ ನಮನ್‌ ಖನ್ನತೆಗೆ ಚಿಕಿತ್ಸೆ ಪಡೆಯುತ್ತಿದ್ದ ಎಂದು ದೂರಿನಲ್ಲಿ ಹೆತ್ತವರು ತಿಳಿಸಿದ್ದರು. ಆತ ಖನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿರ ಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

No Comments

Leave A Comment