Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವರಾತ್ರೆಯ "ಚ೦ಡಿಕಾ ಹೋಮ " ಕಾರ್ಯಕ್ರಮವು 19-10-2018ರ೦ದು ಜರಗಲಿದೆ....

ಅಪಘಾತವಾಗಿ ಹಾಸಿಗೆ ಹಿಡಿದಿದ್ದ ಯುವಕನ ನೆರವಿಗೆ 16 ವರ್ಷಗಳ ಬಳಿಕ ದೆಹಲಿಯಿಂದ ಉಡುಪಿಗೆ ಬಂದ ರಾಖಿ ತಂಗಿ!

ಉಡುಪಿ: ಕೆಲವೊಮ್ಮೆ ರಕ್ಷ ಸಂಬಂಧಿಗಳೇ ನೆರವಾಗಲು ಹಿಂದೆ ಮುಂದೆ ನೋಡುತ್ತಾರೆ. ಅಂತಹದರಲ್ಲಿ ಹೈಸ್ಕೂಲ್‌ನಲ್ಲಿ ಇದ್ದಾಗ ರಾಖಿ ಕಟ್ಟಿಸಿಕೊಂಡಿದ್ದ ಅಣ್ಣನಾಗಿದ್ದವನು ಇಂದು ಅಪಘಾತದಲ್ಲಿ ತಮ್ಮ ಎರಡೂ ಕಾಲನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ದೂರದ ದೆಹಲಿಯಲ್ಲಿದ್ದ ರಾಖಿ ತಂಗಿ ಅಣ್ಣನ ನೆರವಿಗೆ ಧಾವಿಸಿರುವುದು ನಿಜಕ್ಕೂ ಮನಕಲಕುವಂತಿದೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಿಟ್ಟೆ ಬಳಿ ವಾಸವಿರುವ ರಮಾನಂದ್ ಸದ್ಯ ಅಪಘಾತವಾಗಿ ತಮ್ಮ ಎರಡು ಕಾಲನ್ನು ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜೀವನೋಪಾಯಕ್ಕಾಗಿ ಸಾಲಸೋಲ ಮಾಡಿ ರಮಾನಂದ್ ಆಟೋ ರಿಕ್ಷಾವನ್ನು ಕೊಂಡು ಓಡಿಸುತ್ತಿದ್ದರು. ವಿಧಿಯಾಟ ಆಗಸ್ಟ್ 20ರಂದು ಕಾರ್ಕಳ ಬಳಿ ಅಪಘಾತದಲ್ಲಿ ರಮಾನಂದ್ ಗಂಭೀರವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದರು.
ಮೊದಲೇ ಕಡು ಬಡತನ ಇದರಲ್ಲಿ ಎರಡೂ ಕಾಲು ಕಳೆದುಕೊಂಡಿದ್ದ ರಮಾನಂದ್ ಪರಿಸ್ಥಿತಿ ಶೋಚನಿಯವಾಗಿತ್ತು. ಆಸ್ಪತ್ರೆಯ ವೆಚ್ಚಕ್ಕೆ ದುಡ್ಡಿಲ್ಲ ಪರದಾಡುತ್ತಿದ್ದ ರಮಾನಂದ್ ಸಹಾಯಕ್ಕೆ ಸ್ನೇಹಿತರು ಬಂದಿದ್ದಾರೆ. ತಮ್ಮ ಕೈಯಲ್ಲಾದ ಸಹಾಯ ಮಾಡಿದ ಸ್ನೇಹಿತರು ನಂತರ ರಮಾನಂದ್ ಗೆ ಆರ್ಥಿಕ ಸಹಾಯ ಹಸ್ತ ಚಾಚುವವರು ಬೇಕಾಗಿದ್ದಾರೆ ಎಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು. ಇದು ತಿಳಿದ ರಾಖಿ ತಂಗಿ ಸ್ಮಿತಾ ಸಂಪತ್ ದೆಹಲಿಯಿಂದ ಉಡುಪಿಗೆ ಬಂದಿದ್ದಾರೆ.
ಸ್ಮಿತಾ ಸಂಪತ್ 9ನೇ ತರಗತಿಯಲ್ಲಿದ್ದಾಗ ಈಕೆ ರಮಾನಂದ್ ಗೆ ರಾಖಿ ಕಟ್ಟಿದ್ದಳು. ವಿದ್ಯಾಭ್ಯಾಸ ಮುಗಿದ ನಂತರ ಸ್ಮಿತಾ ಮದುವೆಯಾಗಿ ದೆಹಲಿಯಲ್ಲಿ ವಾಸವಾಗಿದ್ದಳು. ರಾಖಿ ಕಟ್ಟಿಸಿಕೊಂಡಿದ್ದ ಅಣ್ಣನಿಗಾಗಿ ದೆಹಲಿಯಿಂದ ಬಂದ ಸ್ಮಿತಾ ತಮ್ಮ ಹಳೆಯ ಸ್ನೇಹಿತರೊಂದಿಗೆ ಸೇರಿ ಎರಡೂವರೆ ಲಕ್ಷ ರುಪಾಯಿ ಒಟ್ಟು ಮಾಡಿ ರಮಾನಂದ್ ಗೆ ನೀಡಿದ್ದಾರೆ.
ಈ ಕುರಿತು ಸ್ಮಿತಾ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಸ್ಮಿತಾಳ ಕ್ಲಾಸ್ ಮೆಂಟ್ ಮಂಜುನಾಥ್ ಎಂಬುವರು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬರೆದಿದ್ದರಿಂದ ವಿಚಾರ ತಿಳಿದು ಬಂದಿದೆ.
No Comments

Leave A Comment