Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವರಾತ್ರೆಯ "ಚ೦ಡಿಕಾ ಹೋಮ " ಕಾರ್ಯಕ್ರಮವು 19-10-2018ರ೦ದು ಜರಗಲಿದೆ....

ರಚಿತಾ ಏಪ್ರಿಲ್‌ ಕನಸು; ಹುಟ್ಟುಹಬ್ಬದಂದೂ ಬುಲ್‌ ಬುಲ್‌ ಬಿಝಿ

ನಟಿ ರಚಿತಾ ರಾಮ್‌ ನಿನ್ನೆಯಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಹಾಗಂತ ಅವರು ಶೂಟಿಂಗ್‌ಗೆ ಚಕ್ಕರ್‌ ಹಾಕಿ, ಹುಟ್ಟುಹಾಕಿ ಆಚರಿಸಿಕೊಂಡಿಲ್ಲ. “ಐ ಲವ್‌ ಯೂ’ ಸೆಟ್‌ನಲ್ಲೇ ಅವರ ಹುಟ್ಟುಹಬ್ಬ ನಡೆದು ಹೋಗಿದೆ. ಹಾಸನ ಬಳಿಯ ಕಾಲೇಜೊಂದರಲ್ಲಿ “ಐ ಲವ್‌ ಯೂ’ ಚಿತ್ರದ ಮಾತಿನ ಭಾಗದ ಚಿತ್ರೀಕರಣ ನಡೆಯುತ್ತಿದ್ದು, ರಚಿತಾ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಆದರೆ, ರಚಿತಾ ರಾಮ್‌ಗೊಂದು ಆಸೆ ಇತ್ತಂತೆ. ಅದು ತಮ್ಮ “ಏಪ್ರಿಲ್‌’ ಸಿನಿಮಾದ ಟೀಸರ್‌ ಬಿಡುಗಡೆ ಮಾಡಬೇಕೆಂದು. “ಏಪ್ರಿಲ್‌’ ನಾಯಕಿ ಪ್ರಧಾನ ಚಿತ್ರವಾಗಿದ್ದು, ರಚಿತಾ ಇಲ್ಲಿ ನಟಿಸುತ್ತಿದ್ದಾರೆ.

ಈ ಚಿತ್ರದ ಟೀಸರ್‌ ಅನ್ನು ತಮ್ಮ ಹುಟ್ಟುಹಬ್ಬ ದಿನ ಬಿಡುಗಡೆ ಮಾಡಬೇಕು, ತಮ್ಮ ಆತ್ಮೀಯ ಬಳಗವನ್ನೆಲ್ಲಾ ಆಹ್ವಾನಿಸಬೇಕೆಂದುಕೊಂಡಿದ್ದರಂತೆ ರಚಿತಾ. ಆದರೆ, ತಾಂತ್ರಿಕ ಕಾರಣಗಳಿಂದಾಗಿ ಅದು ಸಾಧ್ಯವಾಗಿಲ್ಲ. ಸದ್ಯದಲ್ಲೇ ಅದ್ಧೂರಿ ಕಾರ್ಯಕ್ರಮ ಮೂಲಕ ಟೀಸರ್‌ ಬಿಡುಗಡೆ ಮಾಡುವ ಯೋಚನೆ ರಚಿತಾಗಿದೆ. ಅದು ಬಿಟ್ಟರೆ, ರಚಿತಾ ಸಿಕ್ಕಾಪಟ್ಟೆ ಬಿಝಿ. ಸದ್ಯ “ಐ ಲವ್‌ ಯೂ’ ಶೂಟಿಂಗ್‌. ಅದು ಮುಗಿಸಿಕೊಂಡು ಅಕ್ಟೋಬರ್‌ 7 ರಿಂದ “ರುಸ್ತುಂ’ ತಂಡ ಸೇರಿಕೊಳ್ಳಲಿದ್ದಾರೆ.

ಇಲ್ಲಿ ವಿವೇಕ್‌ ಒಬೆರಾಯ್‌ ಜೋಡಿಯಾಗಿ ರಚಿತಾ ಕಾಣಿಸಿಕೊಳ್ಳುತ್ತಿದಾರೆ. ಹಾಗಂತ ಏನು ಪಾತ್ರ ಎಂದು ಕೇಳಿದರೆ ಅದಕ್ಕೆ ಉತ್ತರವಿಲ್ಲ. “ರುಸ್ತುಂ’ ಮುಗಿಸಿಕೊಂಡು “ಸೀತಾರಾಮ ಕಲ್ಯಾಣ’ ಚಿತ್ರದ ಹಾಡುಗಳ ಚಿತ್ರೀಕರಣ. ಅದರ ಬೆನ್ನಿಗೆ “ನಟ ಸಾರ್ವಭೌಮ’. ಈ ಎಲ್ಲಾ ಚಿತ್ರಗಳು ಮುಗಿದ ನಂತರ “ಏಪ್ರಿಲ್‌’ ಶುರುವಾಗಲಿದೆ. ಇದರ ನಡುವೆಯೇ ರಚಿತಾ, ಶಿವರಾಜಕುಮಾರ್‌ ನಾಯಕರಾಗಿರುವ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಹೀಗೆ ಸತತವಾಗಿ ರಚಿತಾ ಬಿಝಿಯಾಗಿರುವುದು ಸುಳ್ಳಲ್ಲ.

“ಶೂಟಿಂಗ್‌ ಮೇಲೆ ಶೂಟಿಂಗ್‌ ನಡೆಯುತ್ತಿದೆ. ಭಾನುವಾರವೂ ಫ್ರೀ ಇಲ್ಲ. ಒಮ್ಮೊಮ್ಮೆ ಬ್ರೇಕ್‌ ಬೇಕು ಅನಿಸುತ್ತದೆ. ಆದರೆ, ಎರಡು ದಿನ ಮನೆಯಲ್ಲಿ ಕುಳಿತಾಗ ಮತ್ತೆ ಶೂಟಿಂಗ್‌ಗೆ ಹೋಗಬೇಕೆನಿಸುತ್ತೆ’ ಎನ್ನುವುದು ರಚಿತಾ ಮಾತು.

No Comments

Leave A Comment