Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವರಾತ್ರೆಯ "ಚ೦ಡಿಕಾ ಹೋಮ " ಕಾರ್ಯಕ್ರಮವು 19-10-2018ರ೦ದು ಜರಗಲಿದೆ....

ಪದ್ಮಶ್ರೀ ಪ್ರಶಸ್ತಿಗೆ ಭಜರಂಗ್, ವಿನೇಶ್ ಹೆಸರು ಶಿಫಾರಸು: ಖೇಲ್ ರತ್ನ ವಿವಾದದ ಬಳಿಕ ಕ್ರೀಡಾ ಸಚಿವಾಲಯ ಮಹತ್ವದ ನಿರ್ಧಾರ

ನವದೆಹಲಿ: ಕಾಮನ್ವೆಲ್ತ್ ಗೇಮ್ಸ್ ಹಾಗೂ ಏಷ್ಯನ್ ಗೇಮ್ಸ್ ಗಳಲ್ಲಿ ಚಿನ್ನದ ಪದಕ ಗೆದ್ದು ಅದ್ಭುತ ಸಾಧನೆ ಮಾಡಿದ್ದ ಕುಸ್ತಿ ಪಟುಗಳಾದ ಭಜರಂಗ್ ಪೂನಿಯಾ ಹಾಗೂ ವಿನೇಶ್ ಪೋಗಟ್  ಅವರ ಹೆಸರನ್ನು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.
ಇತ್ತೀಚೆಗೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಘೋಷಣೆಯಾದ ಸಂದರ್ಭ ತನ್ನನ್ನು ಪ್ರಶಸ್ತಿಗಾಗಿ ಪರಿಗಣಿಸಿಲ್ಲ ಎಂದು ಬಹಿರಂಗವಾಗಿ ಬೇಸರ ಹೊರಹಾಕಿದ್ದ ಭಜರಂಗ್ ಅವರ ಹೆಸರನ್ನು ಇದೀಗ ಕೇಂದ್ರ ಕ್ರೀಡಾ ಸಚಿವಾಲಯ “ಪದ್ಮಶ್ರೀ” ಪ್ರಶಸ್ತಿಗಾಗಿ ಸೂಚಿಸಿದೆ. ವಿಶೇಷವೆಂದರೆ ಭಾರತ ಕುಸ್ತಿ ಸಂಘಟನೆ ಭಜರಂಗ್ ಹಾಗೂ ವಿನೇಶ್ ಹೆಸರನ್ನು ಪದ್ಮ ಪ್ರಶಸ್ತಿಗೆ ಸೂಚಿಸಿಲ್ಲವಾದರೂ ಕ್ರೀಡಾ ಸಚಿವಾಲಯ ಸ್ವಯಂಪ್ರೇರಿತವಾಗಿ ಇಬ್ಬರ ಹೆಸರನ್ನು ಪ್ರಶಸ್ತಿಗೆ ಪರಿಗಣಿಸುವಂತೆ ಗೃಹ ವ್ಯವಹಾರಗಳ ಸಚಿವಾಲಯಕ್ಕೆ ಬರೆದಿದೆ.
ಇದಕ್ಕೆ ಮುನ್ನ ಸಹ ಅಥ್ಲೀಟ್ ಗಳಾದ ಮೀರಾಬಾಯಿ ಚಾನು ತಮಗೆ ಖೇಲ್ ರತ್ನ ಪ್ರಶಸ್ತಿ ಬರುವ ಮುನ್ನವೇ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರೆನ್ನುವುದನ್ನು ನಾವಿಲ್ಲಿ ಸ್ಮರಿಸಬಹುದು.
ಖೇಲ್ ರತ್ನ ಪ್ರಶಸ್ತಿ ಆಯ್ಕೆ ಸಮಿತಿ ತನ್ನ ಹೆಸರನ್ನು ಪರಿಗಣಿಸದ ಕಾರಣ ಸಮಿತಿ ವಿರುದ್ಧ ನ್ಯಾಯಾಲಯಕ್ಕೆ ತೆರಳುವುದಾಗಿ ಭಜರಂಗ್ ಬೆದರಿಕೆ ಹಾಕಿದ್ದರು. ಭಜರಂಗ್ ಅವರಿಗೆ ೮೦ ಅಂಕ ದೊರಕಿದ್ದರೂ ಅವರನ್ನು ಪ್ರಶಸ್ತಿಗೆ ಪರಿಗಣಿಸಿರ್ಲಿಲ್ಲ. ಈ ಸಂಬಂಧ ಅವ್ಚರು ಸೆಪ್ಪ್ಟೆಂಬರ್ ೨೦ರಂದು ಕೇಂದ್ರ ಕ್ರೀಡಾ ಸಚಿವರನ್ನು ಭೇಟಿಯಾಗಿ ತನ್ನ ಅಸಮಾಧಾನ ತೋಡಿಕೊಂಡಿದ್ದರು. ಸಚಿವರು ಅವರಿಗೆ ಸಕಾರಾತ್ಮಕ ಭರವಸೆ ನೀಡಿದ ಕಾರಣ ನ್ಯಾಯಾಲಯಕ್ಕೆ ತೆರಳುವ ತಮ್ಮ ನಿರ್ಧಾರವನ್ನು ಕುಸ್ತಿಪಟು ಕೈಬಿಟ್ಟಿದ್ದರು.
No Comments

Leave A Comment