Log In
BREAKING NEWS >
ನೇಪಾಳದಲ್ಲಿ ಭಾರತದ 2000, 500, 200 ರೂ. ಮುಖಬೆಲೆಯ ನೋಟು ಬ್ಯಾನ್!.....ರಾಜಸ್ಥಾನ: ಅಶೋಕ್‌ ಗೆಹ್‌ಲೋಟ್‌ ಸಿಎಂ,ಸಚಿನ್‌ ಪೈಲಟ್‌ ಡೆಪ್ಯುಟಿ ಸಿಎಂ

ಉಡುಪಿ:ಲಲಿತ ಪ೦ಚಮಿಯ ಪ್ರಯುಕ್ತ ಜಿ ಎಸ್ ಬಿ ಮಹಿಳಾ ಮ೦ಡಳಿಯ ಆಶ್ರಯದಲ್ಲಿ ವಿವಿಧ ಆಟೋಟ ಸ್ಪರ್ಧೆ

ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದ ಜಿ ಎಸ್ ಬಿ ಮಹಿಳಾ ಮ೦ಡಳಿಯ ಅಶ್ರಯದಲ್ಲಿ ಭಾನುವಾರದ೦ದು ನವರಾತ್ರೆಯಲ್ಲಿ ನಡೆಯಲಿರುವ ಲಲಿತ ಪ೦ಚಮಿಯ ಪ್ರಯುಕ್ತವಾಗಿ ಜಿ ಎಸ್ ಬಿ ಸಮಾಜದ ಮಹಿಳೆಯರಿಗೆ ಮತ್ತು ಮಕ್ಕಳಿಗೆ ವಿವಿಧ ಸ್ಪರ್ಧೆಯನ್ನು ನಡೆಸಲಾಯಿತು.

ಹೂ ಕಟ್ಟುವ, ರ೦ಗವಲ್ಲಿ, ಹೌಜಿ ಹೌಜಿ, ಬೆಲುನನ್ನು ಬೆನ್ನಿನಲ್ಲಿ ಇಟ್ಟುಕೊ೦ಡು ನಡೆಯುವುದು, ಸ್ಟ್ರೋನಿ೦ದ ಕಡಲೆ ಎಳೆಯುವುದು, ಕಡದ ಪದಗಳಿಗೆ ಕೊ೦ಕಣಿಯಲ್ಲಿ ಹೇಗೆ ಬರೆಯುವುದು, ಗಾದೆಗಳನ್ನು ಬರೆಯುವ ಮತ್ತು ಪುಟಾಣೆ ಮಕ್ಕಳಿಗಾಗಿ ತಲೆಯಲ್ಲಿ ಪುಸ್ತಕವನ್ನಿಟ್ಟುಕೊ೦ಡು ನಡೆಯುವ ಸ್ಪರ್ಧೆ ಹಾಗೂ ಹೂವನ್ನು ಹೆಕ್ಕುವ ಸ್ಪರ್ಧೆಯು ಸೇರಿದ೦ತೆ ಮಗ್ಗಿಯನ್ನು ಉಪಯೋಗಿಸಿ ಆಟವನ್ನು ನಡೆಸುವುದರೊ೦ದಿಗೆ ವಿವಿಧ ಸ್ಪರ್ಧೆಯನ್ನು ನಡೆಸಲಾಯಿತು.

ಮಹಿಳಾ ಮ೦ಡಳಿಯ ಅಧ್ಯಕ್ಷೆ ಹಾಗೂ ಸರ್ವಸದಸ್ಯರು ಈ ಸ೦ದರ್ಭದಲ್ಲಿ ಹಾಜರಿದ್ದರು.

No Comments

Leave A Comment