Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವರಾತ್ರೆಯ "ಚ೦ಡಿಕಾ ಹೋಮ " ಕಾರ್ಯಕ್ರಮವು 19-10-2018ರ೦ದು ಜರಗಲಿದೆ....

ದೀರ್ಘ ಕಾಲದ ಬಳಿಕ ಕೈಗೂಡಿದ ಕನಸು: ‘ಗಡಿನಾಡು’ ಹುಡುಗಿಯಾದ ಸಂಚಿತಾ ಪಡುಕೋಣೆ

ಬೆಂಗಳೂರು: ಮತ್ತೆ ಸ್ಯಾಂಡಲ್ ವುಡ್ ನಲ್ಲಿ ನಟಿಸಬೇಕೆನ್ನುವ ಸಂಚಿತಾ ಪಡುಕೋಣೆ ದೀರ್ಘ ಕಾಲದ ಕನಸು ಕಡೆಗೂ ಕೈಗೂಡುವ ಕಾಲ ಸನ್ನಿಹಿತವಾಗಿದೆ. ಶರಣ್ ಅಭಿನಯದ “ಸತ್ಯ ಹರಿಶ್ಚಂದ್ರ” ದಲ್ಲಿ ಕಡೆಯದಾಗಿ ಕಾಣಿಸಿಕೊಂಡಿದ್ದ ನಟಿ ಇದೀಗ ಒಂದಲ್ಲ ಎರಡು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ “ಮುತ್ತು ಕುಮಾರ” ಮತ್ತು ಗಡಿನಾಡು” ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಗಟ್ಟಿಯಾಗಿ ತಳವೂರಲು ಬಯಸಿದ್ದಾರೆ.
ರವಿ ಸಾಗರ್ ನಿರ್ದೇಶನದ “ಮುತ್ತು ಕುಮಾರ” ಹಾಗೂ ನಾಗ್ ಹುಣಸೂರು ನಿರ್ದೇಶನದ  “ಗಡಿನಾಡು” ಚಿತ್ರದಲ್ಲಿ ಏಕಕಾಲಕ್ಕೆ ಅಭಿನಯಿಸುತ್ತಿದ್ದಾರೆ. “ಮುತ್ತು ಕುಮಾರ”ದಲ್ಲಿ “ಸೈಕೋ ಖ್ಯಾತಿಯ ಧನುಷ್ ಗೆ ಸಂಚಿತಾ ನಾಯಕಿಯಾಗಲಿದ್ದಾರೆ.”ಗಡಿನಾಡು” ಚಿತ್ರದಲ್ಲಿ  ಪ್ರಭು ಸೂರ್ಯ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
“ಪ್ರತಿಯೊಬ್ಬ ನಟಿಗೆ ನಾಯಕಿಯಾಗಬೇಕು, ತಾನು ಹುಟ್ಟಿ ಬೆಳೆದ ನಾಡಿನ ಚಿತ್ರರಂಗದಲ್ಲಿ ಗುರುತಿಸಿಕೊಳ್ಳಬೇಕು ಎನ್ನುವ ಮಹದಾಸೆ ಇರುತ್ತದೆ. ಯಾವಾಗ ಚಿತ್ರ ನಿರ್ಮಾಪಕರು ತಮ್ಮನ್ನು, ತಮ್ಮ ಪ್ರತಿಭೆಯನ್ನು ಗುರುತಿಸುವರೋ ಆಗ ಆಗುವ ಸಂತಸಕ್ಕೆ ಪಾರವಿಲ್ಲ” ಎನ್ನುವ ಸಂಚಿತಾ “ನಾವು ಎಲ್ಲೇ ಹೋಗಿ ಯಾವ ಭಾಷೆಯಲ್ಲಿಯೇ ನಟಿಸಿದರೂ ತಾಯ್ನಾಡಿನ, ಮಾತೃಭಾಷೆಯಲ್ಲಿ ನಟಿಸಿದಾಗ ಸಿಕ್ಕುವ ಸಂತೋಷಕ್ಕೆ ಸರಿಸಾಟಿಯಾಗಿರುವುದಿಲ್ಲ” ಎನ್ನುತ್ತಾರೆ.
“ಸತ್ಯ ಹರಿಶ್ಚಂದ್ರ” ಬಳಿಕ ಮತ್ತೊಂದು ಅವಕಾಶಕ್ಕಾಗಿ ತಾನು ಬಹಳ ಕಾಲ ಕಾಯಬೇಕಾಗಿತ್ತು ಎನ್ನುವ ಅನಟಿ “ನಾನೆಷ್ಟೇ ಪ್ರಯತ್ನ ಪಟ್ಟರೂ ಕನ್ನಡದಲ್ಲಿ ಇನ್ನೊಂದು ಅವಕಾಶ ಸಿಗದೆ ಹೋದಾಗ ಜನರು ನನ್ನನ್ನು ಮರೆತೇ ಹೋದರೆಂದು ಭಾವಿಸಿದ್ದೆ. ಆದರೆ ಹಾಗಾಗಲಿಲ್ಲ, ಮತ್ತೆ ಅವಕಾಶ ಸಿಕ್ಕಿದೆ” ಎಂದು ಖುಷಿಯಾಗಿ ಹೇಳುತ್ತಾರೆ. “ಗಡಿನಾಡು ಚಿತ್ರ ಬೆಳಗಾವಿಯಲ್ಲಿ ಚಿತ್ರೀಕರಣ ನಡೆದರೆ ಮುತ್ತು ಕುಮಾರ ಮೈಸೂರಿನ ಸುತ್ತ ಮುತ್ತ ಶೂಟಿಂಗ್ ನಡೆಯುತ್ತದೆ, ಎರಡೂ ಚಿತ್ರಗಳ ಚಿತ್ರೀಕರಣ ಅಕ್ಟೋಬರ್ ನಲ್ಲಿ ಪ್ರಾರಂಬಗೊಲ್ಲಲಿದೆ” ಅವರು ವಿವರಿಸಿದ್ದಾರೆ.
No Comments

Leave A Comment