Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

8 ವರ್ಷದ ಬಾಲಕನ ಮೇಲೆ ಲೈಂಗಿಕ ವಿಕೃತಿ ಮೆರೆದ ಕಾಮಾಂಧ ಪ್ರಿನ್ಸಿಪಾಲ್‌

ಹೈದ್ರಾಬಾದ್‌‌:ನಿತ್ಯ ನಿರಂತರವಾಗಿ ಬಾಲಕಿಯರ ಮೇಲೆ ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಿರುವ ಬೆನ್ನಲ್ಲೇ ಹೈದ್ರಾಬಾದ್‌ನ ಕಾಮಾಂಧ ಪ್ರಿನ್ಸಿಪಾಲ್‌ ಓರ್ವ 2 ನೇ ತರಗತಿ ಬಾಲಕನ ಮೇಲೆ ಶಾಲೆಯಲ್ಲೇ ಲೈಂಗಿಕ ವಿಕೃತಿ ಮೆರೆದಿದ್ದಾನೆ.

ರಾಜೇಂದ್ರನಗರ ಶಾಲೆಯಲ್ಲಿ ಹೇಯ ಘಟನೆ ನಡೆದಿದ್ದು, ವಿಕೃತ ಕಾಮಿ ಪ್ರಿನ್ಸಿಪಾಲ್‌ ಶಾಲಾ ಆಫೀಸ್‌ನಲ್ಲೇ ಬಾಲಕನ ಮೇಲೆ ಲೈಂಗಿಕ ವಿಕೃತಿ ಮೆರೆದಿದ್ದಾನೆ.

ಬಾಲಕ ಶಾಲೆಗೆ ಹೋಗಲು ನಿರಾಕರಿಸಿದ್ದು, ಗುದದ್ವಾರದಲ್ಲಿ ರಕ್ತಸ್ರಾವವೂ ಆಗುವುದು ಕಂಡು ಬಂದಿದೆ.

ಪೋಷಕರು ರಾಜೇಂದ್ರನಗರ ಠಾಣೆಗೆ ದೂರು ನೀಡಿದ್ದು , ಪೊಲೀಸರು ಪೋಸ್ಕೋ ಕಾಯಿದೆ ಅಡಿ ಪ್ರಕರಣ ದಾಖಲಿಸಿಕೊಂಡು ಪ್ರಿನ್ಸಿಪಾಲ್‌ನನ್ನು  ಬಂಧಿಸಿ ನ್ಯಾಯಾಂಗ ಬಂಧನದಲ್ಲಿರಿಸಿದ್ದಾರೆ.

No Comments

Leave A Comment