ರಾಷ್ಟ್ರ ಮಟ್ಟದ ಓಟದ ಸ್ಪರ್ಧೆ; ಗಾಣದಕಟ್ಟೆ ಅಂಕಿತಾಗೆ ಕಂಚಿನ ಪದಕ
ಉಡುಪಿ: ಇತ್ತೀಚೆಗೆ ಹೈದರಾಬಾದ್ ನಲ್ಲಿ ನಡೆದ ರಾಷ್ಟ್ರೀಯ ದಕ್ಷಿಣ ವಲಯ ಕ್ರೀಡಾ ಕೂಟದ 100 ಮೀಟರ್ ಓಟ ಸ್ಪರ್ಧೆಯಲ್ಲಿ ಗಾಣದಕಟ್ಟೆಯ ಅಂಕಿತಾ ದೇವಾಡಿಗ ಕಂಚಿನ ಪದಕ ಪಡೆದು ರಾಷ್ಟ್ರೀಯ ಸಾಧಕಿಯಾಗಿ ಮೂಡಿ ಬಂದಿದ್ದಾರೆ.
ಕುಮಾರಿ ಅಂಕಿತಾ ಗಾಣದಕಟ್ಟೆ ನಿವಾಸಿಗಳಾದ ಅಶೋಕ್ ದೇವಾಡಿಗ ಮತ್ತು ಜ್ಯೋತಿ ದಂಪತಿಯ ಪುತ್ರಿ. ಅಲೆವೂರಿನ ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯಾಗಿರುವ ಅಂಕಿತಾ ಜಹಿರ್ ಅಬ್ಬಾಸ್ ಮತ್ತು ಲಚ್ಚೆಂದ್ರ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.
ಉಡುಪಿ ನಗರಾಸಭಾ ಸದಸ್ಯ ನವೀನ್ ಭಂಡಾರಿ ಈಕೆಯ ಕ್ರೀಡಾ ಚಟುವಟಿಕೆಗಳಿಗೆ ಸಹಾಯ ಮಾಡುತ್ತಿದ್ದು, ಆಕೆಯ ಕ್ರೀಡಾ ಸಾಧನೆಗೆ ಶುಭ ಹಾರೈಸಿದ್ದಾರೆ.