ಮಧ್ಯರಾತ್ರಿಯಿಂದಲೇ ಎಸಿ, ಫ್ರಿಜ್ ದರ ಹೆಚ್ಚಳಹೊಸದಿಲ್ಲಿ: ಕುಸಿಯುತ್ತಿರುವ ರೂಪಾಯಿ ಮೌಲ್ಯವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯನ್ನಿಟ್ಟ ಕೇಂದ್ರ ಸರಕಾರ ಏರ್ ಕಂಡೀಶನರ್, ರೆಫ್ರಿಜರೇಟರ್ ಸಹಿತ 19 ಸಾಮಗ್ರಿ ಗಳ ಆಮದು ಸುಂಕವನ್ನು ಏರಿಸಿದೆ. ಇದರಿಂದಾಗಿ ವಿದೇಶದಿಂದ ಆಮದಾಗುವ ಈ ಎಲ್ಲ ವಸ್ತುಗಳ ದರ ಏರಿಕೆಯಾಗಲಿದೆ.ಬುಧವಾರ ಮಧ್ಯರಾತ್ರಿಯಿಂದಲೇ ಈ ದರ ಜಾರಿಯಾಗಲಿದ್ದು ವಿಮಾನ ಪ್ರಯಾಣ, ಚಪ್ಪಲಿ, ವಾಷಿಂಗ್ ಮೆಶಿನ್ಗಳು, ಸ್ಪೀಕರುಗಳು, ರೇಡಿಯಲ್ ಕಾರ್ ಟೈರ್ಗಳು, ಆಭರಣ, ಅಡುಗೆ ಮನೆ ಸಾಮಗ್ರಿಗಳು, ಕೆಲವು ಪ್ಲಾಸ್ಟಿಕ್ ಸಾಮಗ್ರಿಗಳು ಮತ್ತು ಸೂಟ್ಕೇಸ್ಗಳು ದುಬಾರಿಯಾಗಲಿವೆ. ಕಳೆದ ವಿತ್ತ ವರ್ಷದಲ್ಲಿ ಈ ಸಾಮಗ್ರಿಗಳನ್ನು 86 ಸಾವಿರ ಕೋಟಿ ರೂ. ವೆಚ್ಚದಲ್ಲಿ ಆಮದು ಮಾಡಿಕೊಳ್ಳಲಾಗಿತ್ತು.ಎಸಿಗಳು, ರೆಫ್ರಿಜರೇಟರ್ಗಳು ಮತ್ತು ವಾಷಿಂಗ್ ಮೆಶಿನ್ಗಳ ಆಮದು ಸುಂಕ ದ್ವಿಗುಣಗೊಂಡಿದೆ.