Log In
BREAKING NEWS >
ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಸ್ಯಾಂಡಲ್‌ವುಡ್‌ನ‌ ಹಿರಿಯ ಪೋಷಕ ನಟ ಸದಾಶಿವ ಬ್ರಹ್ಮಾವರ್‌ ಇನ್ನಿಲ್ಲ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟ ನಟ ಸದಾಶಿವ್‌ ಬ್ರಹ್ಮಾವರ್‌ ಅವರು ಇಹಲೋಕ ತ್ಯಜಿಸಿದ್ದಾರೆ.ಅವರಿಗೆ 90 ವರ್ಷ ವಯಸ್ಸಾಗಿತ್ತು.

ವಾರ್ಧಕ್ಯದಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬುಧವಾರ ಮಧ್ಯಾಹ್ನ ಅವರು ಕೊನೆಯುಸಿರೆಳೆದಿದ್ದು,  ಗುರುವಾರವೇ ಸುದ್ದಿಯಾಗಿದೆ.

ಸಾಯುವ ಮುನ್ನ ಸದಾಶಿವ್‌ ಅವರು ನನ್ನ ಕೊನೆಯ ಸುದ್ದಿ ನನ್ನ ಕುಟುಂಬದವರಿಗೆ ಬಿಟ್ಟು ಬೇರೆಯವರಿಗೆ ತಿಳಿಯ ಬಾರದು ಎಂದಿದ್ದರು ಎನ್ನಲಾಗಿದೆ.ಬನಶಂಕರಿಯ ಚಿತಾಗಾರದಲ್ಲಿ ಅವರ ಅಂತ್ಯಕ್ರಿಯೆಯನ್ನು ಮಾಡಲಾಗಿದೆ.

ಕಳೆದ ವರ್ಷ ಮರೆವಿನ ಕಾಯಿಲೆಯಿಂದ ಬಳಲುತ್ತಿದ್ದ ಅವರು ಕುಮಟಾದಲ್ಲಿ  ತಿರುಗಾಡುತ್ತಿದ್ದರು. ಮಾಧ್ಯಮಗಳಲ್ಲಿ ಸುದ್ದಿಯಾದ ಬಳಿಕ ನಟರಾದ ಶಿವರಾಜ್‌ ಕುಮಾರ್‌, ಸುದೀಪ್‌ ಮೊದಲಾದವರು ನೆರವಾಗಿದ್ದರು.ಆ ಬಳಿಕ ಕುಟುಂಬದವರೊಂದಿಗೆ ವಾಸವಾಗಿದ್ದರು.

150 ಕ್ಕೂ ಹೆಚ್ಚು ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಸದಾಶಿವ್‌ ನಟಿಸಿದ್ದರು. ಕೆಲ ಧಾರಾವಾಹಿಗಳಲ್ಲೂ ಭಾವನಾತ್ಮಕವಾದ ಪಾತ್ರಗಳನ್ನು ಮಾಡಿದ್ದರು.

No Comments

Leave A Comment