Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವರಾತ್ರೆಯ "ಚ೦ಡಿಕಾ ಹೋಮ " ಕಾರ್ಯಕ್ರಮವು 19-10-2018ರ೦ದು ಜರಗಲಿದೆ....

ಏಷ್ಯಾ ಕಪ್:ಸಮಬಲದ ಹೋರಾಟ ನಡೆಸಿ ಮಣಿದ ಹಾಂಗ್ ಕಾಂಗ್, ಟೀಂ ಇಂಡಿಯಾಗೆ 26 ರನ್ ಜಯ!

ದುಬೈ: ಯುಎಇನಲ್ಲಿ ಸಾಗುತ್ತಿರುವ ಪ್ರತಿಷ್ಠಿತ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಟೀಂ ಇಂಡಿಯಾ ಹಾಂಗ್ ಕಾಂಗ್ ವಿರುದ್ಧ 26 ರನ್ ಗಳ ಅಲ್ಪ ಮೊತ್ತದ ಜಯ ದಾಖಲಿಸಿದೆ.
ಮಂಗಳವಾರ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ಭಾರತ ಒಡ್ಡಿದ್ದ 286 ರನ್ ಗುರಿ ಬೆನ್ನತ್ತಿದ ಹಾಂಗ್ ಕಾಂಗ್ ದಿಟ್ಟ ಪ್ರದರ್ಶನವನ್ನೇ ನಿಡಿದೆ.
ಪ್ರಾರಂಭದಲ್ಲಿ ಕಣಕ್ಕಿಳಿದ ನಿಜಕತ್ ಖಾನ್ ಹಾಗೂ ನಾಯಕ ಅನ್ಶುಮಾನ್ ರಾತ್ ಟೀಂ ಇಂಡಿಯಾ ಬೌಲರ್ ಗಳ ದಾಳಿಯನ್ನು ಸಮರ್ಥವಾಗಿಯೇ ಎದುರಿಸಿದ್ದರು.17.4  ಓವರ್ ಗಳಲ್ಲಿ ಈ ಜೋಡಿ ಶತಕದ ಜತೆಯಾಟ ನೀಡಿ ಭಾರತೀಯ ಪಡೆಯ ಬೆವರಿಳಿಸಿದ್ದು ಸುಳ್ಳಲ್ಲ.
ಹಾಂಗ್ ಕಾಂಗ್ ನ ಪರ ನಿಜಕತ್ ಖಾನ್ 92 ರನ್ ಗಳಿಸಿದ್ದರೆ ನಾಯಕ ಅನ್ಶುಮಾನ್ ರಾತ್ 73 ರನ್ ಪಡೆದಿದ್ದರು. ನಿಜಕತ್ ಖಾನ್ 12 ಬೌಂಡರಿ ಹಾಗೂ ಒಂದು ಸಿಕ್ಸರ್ ದಾಖಲಿಸಿದ್ದರೆ ಅನ್ಶುಮಾನ್ ರಾತ್ ಸಹ 4 ಬೌಂಡರಿ ಹಾಗೂ ಏಕೈಕ ಸಿಕ್ಸರ್ ಸಿಡಿಸಿದ್ದರು.
ಹಾಂಗ್ ಕಾಂಗ್ ಮೊದಲವಿಕೆಟ್ ಗೆ  34.1 ಓವರ್‌ಗಳಲ್ಲಿ 174 ರನ್ ಕಲೆಹಾಕಿತ್ತು.
ಆದರೆ ಭಾರತದ ಖಲೀಲ್ ಅಹ್ಮದ್, ನಿಜಕತ್ ಅವರನ್ನು ಎಲ್‌ಬಿಡಬ್ಲ್ಯು ಆಗಿಸುವಲ್ಲಿ ಸಫಲವಾಗುವುದರೊಡನೆ ತಮ್ಮ ವೃತ್ತಿ ಜೀವನದ ಪ್ರಥಮ ಅಂತರಾಷ್ಟ್ರೀಯ ವಿಕೆಟ್ ಪಡೆದರು.
ಇನ್ನುಳಿದಂತೆ ಹಾಂಗ್ ಕಾಂಗ್ ಪರ ಕ್ರಿಸ್ಟೋಫರ್ ಕಾರ್ಟರ್ (3), ಬಾಬರ್ ಹಯಾತ್ (18)ಕಿಂಚಿತ್ ಷಾ (17), ಏಜಾಜ್ ಖಾನ್ (0), ಸ್ಕಾಟ್ ಮೆಕೆಂಜಿ (7), ಎಹಸನ್ ಖಾನ್ (22) ರನ್ ಗಳಿಸಲಷ್ಟೇ ಸಮರ್ಥರಾದರು.

ಆದರೆ ತಂಡ 40  ಓವರ್ ತಲುಪುವ ವೇಳೆ  ಮೂರು ವಿಕೆಟ್ ನಷ್ಟಕ್ಕೆ 198 ರನ್ ಗಳಿಸಿತ್ತು. ಕಡೆಯ ಹತ್ತು ಓವರ್ ಗಳಲ್ಲಿ ಮಾತ್ರ ತಂಡದ ಸ್ಪೋಟಕ ವೇಗ ಕುಸಿತವಾಗಿ ವಿಕೆಟ್ ಗಳ ಸರಣಿ ಪತನಕ್ಕೆ ಕಾರಣವಾಯಿತು.

ಅಂತಿಮವಾಗಿ 50 ಓವರ್‌ಗಳಲ್ಲಿ ಎಂಟು ವಿಕೆಟ್ ಗಳಿಗೆ 259 ರನ್ ಗಳಿಸುವುದಕ್ಕೆ ಮಾತ್ರ ಶಕ್ಯವಾಗಿತ್ತು.
ಭಾರತ ಪರ ಖಲೀಲ್ ಅಹ್ಮದ್ ಹಾಗೂ ಯುಜೇಂದ್ರ ಚಹಲ್ ತಲಾ 3, ಕುಲ್‌ದೀಪ್ ಯಾದವ್ 2 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್
ಭಾರತ: 285/7 (50.0)
ಹಾಂಗ್ ಕಾಂಗ್: 259/8 (50.0)
No Comments

Leave A Comment