Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವರಾತ್ರೆಯ "ಚ೦ಡಿಕಾ ಹೋಮ " ಕಾರ್ಯಕ್ರಮವು 19-10-2018ರ೦ದು ಜರಗಲಿದೆ....

ಶುಭಪೂಂಜಾ ಈಗ ತರಕಾರಿ ಮಾರುವ ಹುಡುಗಿ!

ಶುಭಪೂಂಜಾ “ಕೆಲವು ದಿನಗಳ ನಂತರ’ ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಶುಭಪೂಂಜಾ ಇದೇ ಮೊದಲ ಬಾರಿಗೆ ಮಲಯಾಳಂನತ್ತ ಮುಖ ಮಾಡಿದ್ದಾರೆ. ಹೌದು, ಮಲಯಾಳಂ ಚಿತ್ರವೊಂದರಲ್ಲಿ ಶುಭಪೂಂಜಾ ನಟಿಸುತ್ತಿದ್ದಾರೆ. ಹೌದು, ಇದೇ ಮೊದಲ ಬಾರಿಗೆ ಅವರು ಮಲಯಾಳಿ ಭಾಷೆಯ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಚಿತ್ರ ಮಲಯಾಳಂ ಹಾಗು ತಮಿಳು ಭಾಷೆಯಲ್ಲಿ ಏಕಕಾಲಕ್ಕೆ ಶುರುವಾಗುತ್ತಿದೆ. ಆ ಚಿತ್ರಕ್ಕೆ “ಥೆನ್‌ಕಾಸಿ ಬ್ರದರ್’ ಎಂದ ನಾಮಕರಣ ಮಾಡಲಾಗಿದೆ. ಈ ಚಿತ್ರದ ಮೂಲಕ ಅಶ್ವಿ‌ನ್‌ ಮ್ಯಾಥೀವ್‌ ನಿರ್ದೇಶಕರಾಗುತ್ತಿದ್ದಾರೆ. ಮಲಯಾಳಂ ಚಿತ್ರರಂಗದಲ್ಲಿ ಬರಹಗಾರರಾಗಿರುವ ಅಶ್ವಿ‌ನ್‌ ಮ್ಯಾಥೀವ್‌, ಅಲ್ಲಿನ ಕಿರುತೆರೆಯಲ್ಲಿ ಹಲವು ಕಾಮಿಡಿ ಶೋಗಳನ್ನು ನಡೆಸಿಕೊಟ್ಟಿದ್ದಾರೆ.

“ಥೆನ್‌ಕಾಸಿ ಬ್ರದರ್’ ಚಿತ್ರದಲ್ಲಿ ಶುಭಪೂಂಜಾ ಅವರು ತರಕಾರಿ ಮಾಡುವ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅದೊಂದು ಬಜಾರಿ, ಸದಾ ಬಾಯಿಬಡಕಿಯಾಗಿರುವ ಹುಡುಗಿಯ ಪಾತ್ರವಾಗಿದ್ದು, ನಟನೆಗೆ ಹೆಚ್ಚು ಜಾಗ ಇರುವಂತಹ ಪಾತ್ರ ಸಿಕ್ಕಿದೆ. ಅದೊಂದು ಕಾಮಿಡಿ ಜೊತೆಗೆ ಆ್ಯಕ್ಷನ್‌ ಇರುವಂತಹ ಚಿತ್ರ ಎನ್ನುವ ಶುಭಪೂಂಜಾ, ಈಗಾಗಲೇ ಆರು ತಮಿಳು ಚಿತ್ರಗಳಲ್ಲಿ ನಟಿಸಿದ್ದೇನೆ.

ಆದರೆ, ಮಲಯಾಳಂ ಭಾಷೆಯ ಚಿತ್ರದಲ್ಲಿ ನಟಿಸಬೇಕು ಎಂಬ ಆಸೆ ಇತ್ತು. ಒಳ್ಳೆಯ ಸ್ಕ್ರಿಪ್ಟ್ ಬಂದರೆ, ಮಾಡುವ ಆಸೆ ಇಟ್ಟುಕೊಂಡಿದ್ದೆ. ಅದು “ಥೆನ್‌ಕಾಸಿ ಬ್ರದರ್’ ಮೂಲಕ ಈಡೇರಿದೆ’ ಎಂದು ವಿವರ ಕೊಡುತ್ತಾರೆ ಶುಭ. ಮಲಯಾಳಂ ಚಿತ್ರದಲ್ಲಿ ನಟಿಸುತ್ತಿರುವುದರಿಂದ ತುಂಬಾನೇ ಖುಷಿ ಇದೆ. ನನಗೆ ತೆಲುಗು, ತಮಿಳು ಭಾಷೆ ಗೊತ್ತು. ಆದರೆ, ಮಲಯಾಳಂ ಭಾಷೆ ಅಷ್ಟಾಗಿ ಬರುವುದಿಲ್ಲ. ಹೇಳಿದ್ದನ್ನು ಅರ್ಥ ಮಾಡಿಕೊಳ್ಳುತ್ತೇನೆ. ಆದರೆ, ಮಾತನಾಡಲು ಸ್ವಲ್ಪ ಕಷ್ಟ. ಆದಷ್ಟು ಬೇಗ ಆ ಭಾಷೆ ಕಲಿಯುವ ನಂಬಿಕೆ ಇದೆ ಎನ್ನುತ್ತಾರೆ.

ಇನ್ನು, ಕನ್ನಡದಲ್ಲೂ ಒಂದಷ್ಟು ಕಥೆಗಳು ಅವರನ್ನು ಹುಡುಕಿ ಬಂದಿವೆ. ಆ ಪೈಕಿ ಈಗಾಗಲೇ ಒಂದು ನಾಯಕಿ ಪ್ರಧಾನ ಕಥೆಯನ್ನು ಅಂತಿಮಗೊಳಿಸಿರುವ ಅವರು, ಇಷ್ಟರಲ್ಲೇ ಆ ಚಿತ್ರದ ಬಗ್ಗೆ ವಿವರ ಕೊಡುವುದಾಗಿ ಹೇಳುತ್ತಾರೆ. ಅಂದಹಾಗೆ, “ಥೆನ್‌ಕಾಸಿ ಬ್ರದರ್’ ಮಲಯಾಳಂ ಹಾಗು ತಮಿಳು ಭಾಷೆಯಲ್ಲಿ ತಯಾರಾಗುತ್ತಿರುವುದರಿಂದ ಅಲ್ಲಿನ ಕಲಾವಿದರ ದಂಡೇ ಇರಲಿದೆ. ಚಿತ್ರದಲ್ಲಿ ಯಾರೆಲ್ಲಾ ಇರುತ್ತಾರೆ ಎಂಬ ಮಾಹಿತಿ ಸದ್ಯಕ್ಕಿಲ್ಲ. ಅಕ್ಟೋಬರ್‌ನಲ್ಲಿ ಚಿತ್ರೀಕರಣ ಶುರುವಾಗಲಿದೆ ಎಂಬುದು ಶುಭ ಮಾತು.

No Comments

Leave A Comment