Log In
BREAKING NEWS >
ಸ್ಯಾಂಡಲ್ ವುಡ್ ನಟ ದರ್ಶನ್ ಮನೆ, ಕಚೇರಿ ಮೇಲೆ ಕಲ್ಲು ತೂರಾಟ,ಕಲ್ಲು ತೂರಾಟ ನಡೆಸಿದ ಪರಿಣಾಮ ಕಾರಿನ ಗಾಜು ಒಡೆದಿದ್ದು, ದುಷ್ಕರ್ಮಿಗಳು...

ಉಡುಪಿ ಮೀನು ಮಾರಾಟಗಾರರ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ 8ನೇ ವಾರ್ಷಿಕ ಮಹಾಸಭೆ

ಉಡುಪಿ: ಮೀನುಗಾರ ಮಹಿಳೆಯರು ತಮ್ಮ ಮೀನುವ್ಯಾಪಾರ ಕುಲಕಸುಬನ್ನು ಅವಲಂಬಿಸಿಕೊಂಡು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸದೃಢರಾಗಬೇಕು. ಮಹಿಳೆಯರಿಂದ ಸ್ಥಾಪನೆಯಾದ ಆರ್ಥಿಕ ಸಂಸ್ಥೆಯಲ್ಲಿ ಹೆಚ್ಚು ಹೆಚ್ಚು ಮಹಿಳೆಯರು ವ್ಯವಹಾರ ನಡೆಸಿದಾಗ ಸಂಘದ ಹೆಚ್ಚಿನ ಲಾಭವನ್ನು ನೇರವಾಗಿ ಸದಸ್ಯರಿಗೆ ವಿನಿಯೋಗಿಸಲು ಸಾಧ್ಯ ಎಂದು ಉಡುಪಿ ಮೀನು ಮಾರಾಟಗಾರರ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷೆ ಬೇಬಿ ಎಚ್.ಸಾಲ್ಯಾನ್ ತಿಳಿಸಿದ್ದಾರೆ.

ಅವರು ಉಡುಪಿ ಕಿನ್ನಿಮೂಲ್ಕಿಯ ವೀರಭದ್ರ ದೇವಸ್ಥಾನದ ಸಭಾಭವನ ಸಭಾಂಗಣದಲ್ಲಿ ಶನಿವಾರ ನಡೆದ ಮೀನು ಮಾರಾಟಗಾರರ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ 8ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಹಸಿಮೀನು ಮಾರಾಟಗಾರ ಮಹಿಳೆಯರ ನೇತೃತ್ವದಲ್ಲಿ ತಾಲೂಕಿನ 30 ಮೀನುಮಾರುಕಟ್ಟೆಗಳ ಸಹಕಾರದೊಂದಿಗೆ ಮೀನುಮಾರಾಟಗಾರರ ಸಹಕಾರಿ ಸಂಘವನ್ನು ಸ್ಥಾಪಿಸಲಾಗಿದ್ದು, ಯಾವುದೇ ರೀತಿಯ ಮೀನಿನಂಗಡಿಗಳನ್ನು ಸ್ಥಾಪಿಸಲು ಸಂಘ ಬಿಡುವುದಿಲ್ಲ. ಆದ್ದರಿಂದ ಮೀನುವ್ಯಾಪಾರ ಮಾಡುವ ಎಲ್ಲಾ ಮಹಿಳೆಯರು ಸಂಘದ ಸದಸ್ಯರಾಗಿ ಸಂಘಟನೆಯ ಬಲಹೆಚ್ಚಿಸಬೇಕು ಎಂದರು.

ಉಡುಪಿ ಮಹಾಲಕ್ಷ್ಮೀ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸಹಕಾರಿಯ ನಿರ್ದೇಶಕ ಯಶ್‍ಪಾಲ್ ಎ.ಸುವರ್ಣ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ಇದೇ ವೇಳೆ ಸಹಕಾರಿಯ ಸದಸ್ಯರ 54ಮಂದಿ ಮಕ್ಕಳಿಗೆ ರೂ. 75000 ವಿದ್ಯಾರ್ಥಿ ವೇತನ, ದೊಡ್ಡಣಗುಡ್ಡೆ ಮೀನುಮಾರುಕಟ್ಟೆಯ ಬೇಬಿ ಮೈಂದನ್ ಗುಜ್ಜರಬೆಟ್ಟು ಅವರಿಗೆ ರೂ. 10000 ಆರೋಗ್ಯ ನೆರವು ಹಾಗೂ ಮಡಿಕೇರಿ ಮತ್ತು ಕೇರಳ ಜಲಾವೃತ ಸಂತ್ರಸ್ತರಿಗೆ ರೂ.5000 ದೇಣಿಗೆಯನ್ನು ವಿತರಿಸಿಲಾಯಿತು. ಪಿಎಚ್‍ಡಿ ಪದವಿ ಪಡೆದ ಬಬಿತ ಶಶಿಕಲ ಸುವರ್ಣ ಉಚ್ಚಿಲ, ಕರಾಠೆಯಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದ ಮಾಣಿಕ್ ಸುವರ್ಣ ಕಟಪಾಡಿ ಅವರನ್ನು ಸನ್ಮಾನಿಸಲಾಯಿತು.

ಸಂಘದ ಉಪಾಧ್ಯಕ್ಷೆ ಜಯಂತಿ ಗುರುದಾಸ್ ಬಂಗೇರ, ಕರ್ನಾಟಕ ರಾಜ್ಯ ಸಂಯುಕ್ತ ಸೌಹಾರ್ದ ಫೇಡರೇಶನ್ ನಿರ್ದೇಶಕ ಮಂಜುನಾಥ್ ಎಸ್.ಕೆ, ನಿರ್ದೇಶಕರುಗಳಾದ ಸುರೇಶ್ ಬಿ.ಕುಂದರ್, ನಾರಾಯಣ ಪಿ ಕುಂದರ್, ಹರೀಶ್ ಜಿ. ಕರ್ಕೇರ,ಲಕ್ಷ್ಮೀ ಆನಂದ್, ಸರೋಜ ಕಾಂಚನ್, ಸುನೀತ ಜೆ.ಬಂಗೇರ,ಇಂದಿರಾ ವಿ.ಕಾಂಚನ್,ಭಾನುಮತಿ ಕಾಂಚನ್, ಜಯಂತಿ ಎನ್. ಕೋಟ್ಯಾನ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಪ್ರಕಾಶ ಸುವರ್ಣ ಕಟಪಾಡಿ ಸ್ವಾಗತಿಸಿ, ವಂದಿಸಿದರು.

No Comments

Leave A Comment