Log In
BREAKING NEWS >
ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ

ವಸುಧೈವ ಕುಟುಂಬಕಂ ಭಾರತದ ವಿಶಿಷ್ಟ ಅಸ್ಮಿತೆ

ಇಂದೋರ್‌: ‘ವಸುಧೈವ ಕುಟುಂಬಕಂ (ವಿಶ್ವವೇ ಒಂದು ಕುಟುಂಬ) ಎಂಬ ಪರಿಕಲ್ಪನೆಯು ಭಾರತದ ಶಕ್ತಿಯಾಗಿದ್ದು, ಅದು ದೇಶಕ್ಕೆ ವಿಶಿಷ್ಟವಾದ ಅಸ್ಮಿತೆಯನ್ನು ಒದಗಿಸಿದ್ದು, ಇತರೆಲ್ಲ ರಾಷ್ಟ್ರಗಳಿಗಿಂತಲೂ ಭಾರತ ವಿಭಿನ್ನವಾಗಿ ಕಾಣುವಂತೆ ಮಾಡಿದೆ. ಬೋಹ್ರಾಂ ಮುಸ್ಲಿಂ ಸಮುದಾಯವು ತನ್ನ ಕೆಲಸದ ಮೂಲಕ ಈ ಪರಿಕಲ್ಪನೆಯನ್ನು ಜಗತ್ತಿನಾದ್ಯಂತ ಪಸರಿಸುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಮಧ್ಯಪ್ರದೇಶದ ಇಂದೋರ್‌ನಲ್ಲಿ ದಾವೂದಿ ಬೋಹ್ರಾ ಸಮುದಾಯ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಧಾನಿ ಮೋದಿ ಈ ಮಾತುಗಳನ್ನಾಡಿದ್ದಾರೆ. ಪ್ರವಾದಿ ಮುಹಮ್ಮದ್‌ರ ಮೊಮ್ಮಗ ಇಮಾಮ್‌ ಹುಸೇನ್‌ ಅವರು ಹುತಾತ್ಮರಾದ ದಿನದ ನೆನಪಿನಲ್ಲಿ ‘ಅಶಾರಾ ಮುಬಾರಕಾ’ ಎಂಬ ಕಾರ್ಯಕ್ರಮವನ್ನು ಇಲ್ಲಿನ ಸೈಫೀ ಮಸೀದಿಯಲ್ಲಿ ಆಯೋಜಿಸಲಾಗಿತ್ತು. ಬೋಹ್ರಾ ಆಧ್ಯಾತ್ಮಿಕ ನಾಯಕ ಸೈಯ್ಯದಿನಾ ಮುಫ‌ದ್ದಲ್‌ ಸೈಫ‌ುದ್ದೀನ್‌ ಅವರೂ ಇದರಲ್ಲಿ ಭಾಗಿಯಾಗಿದ್ದರು. ಅವರೊಂದಿಗೆ ವೇದಿಕೆ ಹಂಚಿಕೊಂಡ ಪ್ರಧಾನಿ ಮೋದಿ, ಬೋಹ್ರಾ ಸಮುದಾಯದ ಬದ್ಧತೆಯನ್ನು ಕೊಂಡಾಡಿದರು. ಈ ಸಮುದಾಯದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೂ ಮೋದಿ ಪಾತ್ರರಾದರು. ಮಧ್ಯಪ್ರದೇಶ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರೂ ಉಪಸ್ಥಿತರಿದ್ದರು.

ಬೋಹ್ರಾ ಬಗ್ಗೆ ಮೆಚ್ಚುಗೆ: ಬೋಹ್ರಾ ಸಮುದಾಯವು ನನ್ನ ಕುಟುಂಬದ ಸದಸ್ಯರಿದ್ದಂತೆ. ನನಗೆ ಅವರೊಂದಿಗೆ ಆತ್ಮೀಯವಾದ ಸಂಬಂಧವಿದೆ. ಅವರಿಗೆ ಪ್ರಾಮಾಣಿಕವಾಗಿ ವ್ಯಾಪಾರ ಮಾಡಲು ಗೊತ್ತಿದೆ. ಹೀಗಾಗಿ ನಮ್ಮ ಸರಕಾರ ಜಾರಿಗೆ ತಂದ ಸ್ವಚ್ಛ ಭಾರತ, ಮೇಕ್‌ ಇನ್‌ ಇಂಡಿಯಾ, ಜಿಎಸ್‌ಟಿಯಂಥ ಯೋಜನೆಗಳ ಗರಿಷ್ಠ ಪ್ರಯೋಜನ ಪಡೆದಿದ್ದಾರೆ. ಆ ಮೂಲಕ ಇತರರಿಗೂ ಅವರು ಮಾದರಿಯಾಗಿದ್ದಾರೆ ಎನ್ನುವ ಮೂಲಕ ಬೋಹ್ರಾಗಳನ್ನು ಪ್ರಧಾನಿ ಶ್ಲಾಘಿಸಿದರು. ಇದೇ ವೇಳೆ, ವ್ಯಾಪಾರವನ್ನು ಯಾವತ್ತೂ ಸರಕಾರದ ನಿಯಮಗಳಿಗೆ ಅನುಸಾರವಾಗಿಯೇ ಮಾಡಬೇಕು ಎಂದೂ ಕರೆ ನೀಡಿದ ಮೋದಿ ಅವರು, ಪ್ರಾಮಾಣಿಕ ವ್ಯಾಪಾರಿಗಳಿಗೆ ನಾವು ಸಹಾಯ ಮಾಡುತ್ತೇವೆ ಎಂದು ಹೇಳಿದರು.

ಗಾಂಧಿ ಮತ್ತು ಸೈಯ್ಯದಿನಾ: ಇದೇ ವೇಳೆ, ಬೋಹ್ರಾ ಸಮುದಾಯದ ದಿವಂಗತ ಧಾರ್ಮಿಕ ನಾಯಕ ಸೈಯ್ಯದಿನಾ ಮೊಹಮ್ಮದ್‌ ಬರ್ಹನುದ್ದೀನ್‌ ಅವರಿಗೂ ಮಹಾತ್ಮ ಗಾಂಧಿಯವರಿಗೂ ಇದ್ದ ಆತ್ಮೀಯತೆ ಬಗ್ಗೆಯೂ ಮೋದಿ ಪ್ರಸ್ತಾಪಿಸಿದರು. ಗಾಂಧಿ ಅವರು ರೈಲು ಪ್ರಯಾಣದ ವೇಳೆ ಸೈಯ್ಯದಿನಾರನ್ನು ಭೇಟಿಯಾದರು. ಅಲ್ಲಿಂದ ಅವರ ಸ್ನೇಹ ಬೆಳೆಯಿತು. ಉಪ್ಪಿನ ಸತ್ಯಾಗ್ರಹದ ವೇಳೆ ಗಾಂಧಿ ಅವರು ಸೈಫೀ ವಿಲ್ಲಾದಲ್ಲೇ ವಾಸ್ತವ ಹೂಡಿದ್ದರು. ನಂತರ ಆ ವಿಲ್ಲಾವನ್ನು ದೇಶಕ್ಕಾಗಿ ಅರ್ಪಿಸಲಾಯಿತು ಎಂದು ಪ್ರಧಾನಿ ಸ್ಮರಿಸಿದರು.

No Comments

Leave A Comment