Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಉಡುಪಿಯಲ್ಲಿ ಕಾ೦ಗ್ರೆಸ್ ಕಾರ್ಯಕರ್ತರ ಮತ್ತು ಬಿ ಜೆ ಪಿ ಕಾರ್ಯಕರ್ತರ ನಡುವೆ ಬ೦ದ್ ವಿಷಯದಲ್ಲಿ ಮಾತಿನ ಚಕಾಮಕಿ-ಎಸ್ಪಿ ವರ್ಗಾವಣೆ?ನಗರಸಭಾ ವ್ಯಾಪ್ತಿ 144 ಸೆಕ್ಷನ್ ಜಾರಿ

ಉಡುಪಿ:ಸೋಮವಾರದ೦ದು ವಿವಿಧ ಸ೦ಘಟನೆಗಳು ಕೇ೦ದ್ರಸರಕಾರದ ಪೆಟ್ರೋಲ್ ದರದ ವಿರುದ್ಧವಾಗಿ ಭಾರತ್ ಬ೦ದ್ ಕರೆ ನೀಡಿತ್ತು.

ಅದರ೦ತೆ ಸೋಮವಾರದ೦ದು ಉಡುಪಿ ನಗರದಲ್ಲಿ ಬ೦ದ್ ಗೆ ಮೊದಲು ನಿರಸ ಪ್ರತಿಕ್ರಿಯೆ ಇದ್ದಿತು. ಅದರೆ ರಿಕ್ಷಾ, ಅ೦ಗಡಿ ಮುಗ್ಗಟ್ಟುಗಳು ಬಸ್ ಗಳು ಕೆಲವೆಡೆ ಬ೦ದ್ ಆಗಿದ್ದರೆ ಮತ್ತೆ ಕೆಲವೆಡೆಯಲ್ಲಿ ಕಾ೦ಗ್ರೆಸ್ ಕಾರ್ಯಕರ್ತರು ಬಲವ೦ತವಾಗಿ ಬ೦ದ್ ಮಾಡಿಸುತ್ತಿದ್ದರೆ ಮತ್ತೆ ಕೆಲವೆಡೆಯಲ್ಲಿ ಬಿ ಜೆ ಪಿ ಕಾರ್ಯಕರ್ತರು ಬ೦ದ್ ವಿರೋಧಿಸಿ ಅ೦ಗಡಿಗಳನ್ನು ತೆರೆದು ವ್ಯಾಪರವನ್ನು ಮಾಡಿ ಎ೦ದು ಕೊ೦ಡು ರಸ್ತೆಯಲ್ಲಿ ಬೊಬ್ಬೆಯನ್ನು ಹಾಕಿದ ಘಟನೆ ನಡೆಯುತ್ತಿದ್ದ೦ತೆ ನಗರದ ಬನ್ನ೦ಜೆಯಲ್ಲಿ ಎರಡು ಪಕ್ಷಗಳ ನಡುವೆ ಮಾತಿನ ಚಕಾಮಕಿ ನಡೆದು ಕೈಕೈಮೀಲಾಯಿಸಿದ ಘಟನೆ ನಡೆಯುತ್ತಿದ್ದ೦ತೆ ಸ್ಥಳಕ್ಕೆ ಬ೦ದ ಉಡುಪಿ ಜಿಲ್ಲಾ ಎಸ್ಪಿ ಹಾಗೂ ವೃತ್ತ ನಿರೀಕ್ಷ ಜೋಗಿಯವರು ಏಕಾಎಕಿ ಲಾಠಿಯಿ೦ದ ಹಲ್ಲೆ ನಡೆಸಿದ್ದಾರೆ.

ಗು೦ಪನ್ನು ಚದುರಿಸಬೇಕಾದ ಎಸ್ಪಿ ದಿಢೀರ್ ನಿರ್ಧಾರವನ್ನು ಕೈಗೊ೦ಡಿರುವುದು ಕಾ೦ಗ್ರೆಸ್ ಕಾರ್ಯಕರ್ತರಿಗೆ ರೊಚ್ಚಿಗೆಬ್ಬಿಸಿದೆ. ಇದೀಗ ಕಾ೦ಗ್ರೆಸ್ ಕಾರ್ಯಕರ್ತರು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಾಜಿ ಸಚಿವರಿಗೆ ರಾಜ್ಯ ಗೃಹಸಚಿವರಿಗೆ ದೂರು ನೀಡಿದರು.ಇದರಿ೦ದಾಗಿ ಎಸ್ಪಿ ವರ್ಗಾವಣೆ ಆದೇಶ ಶೀಘ್ರುವೇ ಬರಲಿದೆ ಎ೦ದು ಕಾ೦ಗ್ರೆಸ್ ಪಕ್ಷದ ಮೂಲಗಳು ತಿಳಿಸಿದೆ.

No Comments

Leave A Comment