Log In
BREAKING NEWS >
ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ

ಸೆಪ್ಟ೦ಬರ್ 6ರಿ೦ದ 8ರವರೆಗೆ ಮಣಿಪಾಲ ಟಿ ಎ೦ ಎಪೈ ಹಾಲಿನಲ್ಲಿ ಕಾವಿ ಕಲೆ ಪ್ರದರ್ಶನ

ಕಲೆಯು ಯಾರನ್ನು ಹೇಗೆ ಆಕರ್ಷಿಸುತ್ತದೆ ಎಂದು ಹೇಳುವುದು ಕಷ್ಟ. ಕಲಾತ್ಮಕವಾಗಿ ಕೆಲವರು ತಮ್ಮದೇ ಆದ ರೀತಿಯಲ್ಲಿ ಕಲೆಯನ್ನು ನೆಚ್ಚಿ
ಕೊಂಡಿರುತ್ತಾರೆ. ಕಲೆಯ ಪ್ರಕಾರಗಳಲ್ಲಿ ಬಹಳ ಪ್ರಾಚೀನ ಕಲೆಯಾದ ಕಾವಿ ಕಲೆಯು ಆಕರ್ಷಿಸಿದ್ದು ಶ್ರೀಮತಿ ವೀಣಾ ಶ್ರೀನಿವಾಸರವರಿಗೆ ಕಾವಿ ಕಲೆಯು 16ನೇ ಶತಮಾನದಲ್ಲಿ ಗೋವಾದಲ್ಲಿ ಬಹಳ ಪ್ರಚಲಿತದಲ್ಲಿತ್ತು. ಆಗ ಅಲ್ಲಿ ಪೋರ್ಚುಗೀಸರ ಆಳ್ವಿಕೆಯಿತ್ತು. ಅಲ್ಲಿನ ಕೊಂಕಣಿಗರು ಈ ಕಾವಿ ಕಲೆಯ ಆರಾಧಕರು, ಸ್ವತಃ ಕಲಾವಿದರೂ ಕೂಡ ಆಗಿದ್ದರು. ನಂತರದ ದಿನಗಳಲ್ಲಿ ಗೋವಾದಿಂದ ವಲಸೆ ಹೋದ ಕೊ೦ಕಣಿಗರು ಕರ್ನಾಟಕದ ಕರಾವಳಿಯ ದೇಗುಲದ ಗೋಡೆಗಳಲ್ಲಿ ಈ ಕಲೆಯನ್ನು ಚಿತ್ರಿಸಿ, ಆ ಕಲೆಯ ಉಳಿವಿಗಾಗಿ ಹೋರಾಟ ಮಾಡಿದ್ದು ಈಗ ಇತಿಹಾಸ.

ಸಾಮಾನ್ಯವಾಗಿ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಕುಂದಾಪುರ ಅಲ್ಲಿನ ಹೆಚ್ಚಿದ ದೇವಾಲಯಗಳಲ್ಲಿ ಇಂದಿಗೂ ಕೂಡ ಅದ್ಬುತ ಕಲಾ ಪ್ರಕಾರವಾದ ಕಾವಿ ಕಲೆ ತನ್ನದೇ ಆದ ಮೆರುಗನ್ನು ಪಡೆದುಕೊಂಡಿರುವುದು ವಿಶೇಷ. ಇಲ್ಲಿರುವ ಈ ಕಾವಿ ಕಲೆಯ ಶ್ರೀಮಂತಿಕೆಗೆ ಮಾರು ಹೋದವರು ಶ್ರೀಮತಿ ವೀಣಾ ಶ್ರೀನಿವಾಸ. ನಂತರದ ದಿನಗಳಲ್ಲಿ ಕಾವಿ ಕಲೆಯನ್ನು ಅಧ್ಯಯನ ಮಾಡಿ ಇಂದು ಕಾವಿ ಕಲೆಯ ಅದ್ಭುತ ಕಲಾವಿದರಾಗಿರುವುದು ವಿಶೇಷ.

ಶ್ರೀಮತಿ ವೀಣಾ ಶ್ರೀನಿವಾಸ ಮಂಗಳೂರಿನ ಮಾಧವರಾವ್ ಪಾವ೦ಜೆಯವರ ಬಳಿ ಕಲಾಶಿಕ್ಷಣದ ತರಬೇತಿ ಪಡೆದರು. ಇವು ಕಾವಿ ಕಲೆಯಲ್ಲಿ ಸೂರ್ಯಮ೦ಡಲ, ದಶಾವತಾರ, ಸಪ್ತ ಮಾತ್ರಿಕ, ಗಣೇಶ, ವೀಣಾ,ರಣಪಥ, ಹೇರಂಭ ಹೀಗೆ ಒಂದಕ್ಕಿಂತ ಒಂದು ರೀತಿಯ ವಿಭಿನ್ನ
ಕಲಾಕೃತಿಗಳನ್ನು ರಚಿಸಿದ ಹೆಗ್ಗಳಿಕೆ ಅವರದು. ಇವರು ರಾಜ್ಯರಾಷ್ಟ್ರಮಟ್ಟದಲ್ಲಿ ಹಲವಾರು ಕಾರ್ಯಾಗಾರಗಳು, ಅದರ ಜೊತೆಗೆ
ತರಬೇತಿ ನೀಡಿರುವುದು ವಿಶೇಷ. ಈ ಕಲಾಪ್ರಕಾರದ ಉಳಿವಿಗೆ ಅವಿರತವಾಗಿ ಶ್ರಮಿಸುತ್ತಿದ್ದಾರೆ.

ಶ್ರೀಮತಿ ವೀಣಾ ಶ್ರೀನಿವಾಸರವರು ಹೇಳುವ ಪ್ರಕಾರ ‘ಕಾವಿ ಕಲೆಯು ಬಹಳ ಪ್ರಾಚೀನ ಕಲಾ ಪ್ರಕಾರಗಳಲ್ಲಿ ಒಂದಾಗಿದ್ದು, ಇದರ ಬಗ್ಗೆ ತಿಳಿಸಿ ಅದನ್ನು ಉಳಿಸುವ ನಿಟ್ಟಿನಲ್ಲಿ ಸಣ್ಣ ಪ್ರಯತ್ನವನ್ನು ಮಾಡುತ್ತಿದ್ದೇನೆ. ಮುಂದಿನ ಪೀಳಿಗೆಗೆ ಇಂತಹ ಕಲಾಪ್ರಕಾರದ ಪರಿಚಯ ಮಾಡಿ ಕೊಟ್ಟ ಹಾಗೆ ಆಗುತ್ತದೆ. ಇಲ್ಲವಾದರೆಹೇಳ ಹೆಸರಿಲ್ಲದೇ ಹೋಗ ಬಹುದು. ಈ ಕಲಾಪ್ರಕಾರದ ಉಳಿವಿಗಾಗಿ ಶ್ರಮಿಸುತ್ತಿರುವ ವೀಣಾಶ್ರೀನಿವಾಸರವರನ್ನು ಅಭಿನ೦ದಿಸಲು- 9845417777

ಕಾವಿಕಲೆ ಕಾರ್ಯಕ್ರಮವು ಇದೇ ತಿ೦ಗಳ ಸೆಪ್ಟ೦ಬರ್ 6ರಿ೦ದ 8ರವರೆಗೆ ಮಣಿಪಾಲ ಟಿ ಎ೦ ಎಪೈ ಹಾಲಿನಲ್ಲಿ ಬೆಳಿಗ್ಗೆ 9.30ರಿ೦ದ ಸ೦ಜೆ 6ರತನಕ ನೋಡಬಹುದಾಗಿದೆ.ಪ್ರವೇಶ ಉಚಿತ

No Comments

Leave A Comment