Log In
BREAKING NEWS >
Smriti Irani says writing on the wall for Rahul Gandhi...

ಉತ್ತರಾಖಂಡದಲ್ಲಿ ಭೂಕುಸಿತಕ್ಕೆ ಮನೆ ನಾಶ; ಮೂವರ ಸಾವು, 8 ನಾಪತ್ತೆ

ಡೆಹರಾಡೂನ್‌ : ಉತ್ತರಾಖಂಡದ ಬುದ ಕೇದಾರ್‌ ಸಮೀಪದ ಕೋಟ್‌ ಗ್ರಾಮದಲ್ಲಿ ಸಂಭವಿಸಿದ ಭೂಕುಸಿತದಿಂದ ಮನೆ ನಾಶವಾದ ದುರಂದಲ್ಲಿ ಕನಿಷ್ಠ ಮೂವರು ಮೃತಪಟ್ಟಿದ್ದು ಎಂಟು ಮಂದಿ ಅವಶೇಷಗಳಡಿ ಸಿಲುಕಿಕೊಂಡಿರುವುದಾಗಿ ವರದಿಯಾಗಿದೆ.

ಈ ತನಕ ಮೂರು ಮೃತ ದೇಹಗಳನ್ನು ಹೊರತೆಗೆಯಲಾಗಿದೆ. ಎಂಟು ಮಂದಿ ಕಟ್ಟಡದ ಅವಶೇಷಗಳಡಿ ಸಿಲುಕಿಕೊಂಡಿದ್ದು ಅವರನ್ನು ಹೊರ ತರುವ ಯತ್ನ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜ್ಯದ ವಿಪತ್ತು ನಿರ್ವಹಣ ದಳ ಮತ್ತು ಜಿಲ್ಲಾಡಳಿತದ ಹಲವು ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ನಡೆಸುತ್ತಿದ್ದಾರೆ.

ಕಳೆದ ಜೂನ್‌ ತಿಂಗಳಲ್ಲಿ ಉತ್ತರಾಖಂಡದ ಪಿತೋರ್‌ಗಢ ಜಿಲೆಲಯ ಧಾರ್‌ ಛುಲಾ ಗ್ರಾಮದಲ್ಲಿ  ಇದೇ ರೀತಿ ಸಂಭವಿಸಿದ್ದ ಭೂಕುಸಿತಕ್ಕೆ ಓರ್ವ ವ್ಯಕ್ತಿ ಬಲಿಯಾಗಿ ಇತರ ಮೂವರು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದರು.

ಉತ್ತರಾಖಂಡದ ಪಿತೋರ್‌ಗಢ ಗಡಿ ಜಿಲ್ಲೆಯಲ್ಲಿ ಕಳೆದ ವರ್ಷ ಸಂಭವಿಸಿದ್ದ ಭೂ ಕುಸಿತ ಪ್ರಕರಣಗಳಲ್ಲ ಆರು ಮಂದಿ ಮಡಿದು ಏಳು ಮಂದಿ ಸೇನಾ ಸಿಬಂದಿಗಳ ಸಹಿತ 22 ಮಂದಿ ನಾಪತ್ತೆಯಾಗಿದ್ದರು.

No Comments

Leave A Comment